ಜೆರುಸಲೇಮ್: ಗಾಜಾ ಪ್ರದೇಶದಲ್ಲಿ ಕದನ ವಿರಾಮ ಜಾರಿಗೆ ಬಂದಿದ್ದು, ಇಸ್ರೇಲ್ ಮತ್ತು ಹಮಾಸ್ ನಡುವಿನ ಉಗ್ರ ಹೋರಾಟ ಈ ಮೂಲಕ ಬಹುತೇಕ ಅಂತ್ಯಗೊಂಡಿದೆ.
ಈಜಿಪ್ಟ್ ಮಧ್ಯವರ್ತಿಗಳ ಮೂಲಕ ಕದನ ವಿರಾಮವು ಇಂದು ಮುಂಜಾನೆ ಪ್ರಾರಂಭವಾಗಿದೆ, ಇದು 11 ದಿನಗಳ ಉಗ್ರ ಹೋರಾಟವನ್ನು ಕೊನೆಗೊಳಿಸಿದೆ.
ಇಸ್ರೇಲ್ನ ಭದ್ರತಾ ಕ್ಯಾಬಿನೆಟ್ ಗಾಜಾ ಪ್ರದೇಶದಲ್ಲಿ ಕದನ ವಿರಾಮವನ್ನು ಅಂಗೀಕರಿಸಿದೆ. ಇಸ್ರೇಲ್ ಮತ್ತು ಹಮಾಸ್ ನಡುವೆ ದಶಕಗಳಲ್ಲಿ ಅತ್ಯಂತ ಆಕ್ರಮಣಕಾರಿಯಾದ ಸಂಘರ್ಷಕ್ಕೆ ಕಳೆದ ಕೆಲವು ದಿನಗಳು ಸಾಕ್ಷಿಯಾಗಿತ್ತು.
ಮಧ್ಯವರ್ತಿ ಈಜಿಪ್ಟ್ ಪ್ರಸ್ತಾಪಿಸಿದ ಪರಸ್ಪರ ಮತ್ತು ಬೇಷರತ್ತಾದ ಒಪ್ಪಂದದ ಪರವಾಗಿ ಸರ್ವಾನುಮತದಿಂದ ಮತ ಚಲಾಯಿಸಲಾಗಿದೆ ಎಂದು ಇಸ್ರೇಲ್ ಕ್ಯಾಬಿನೆಟ್ ಹೇಳಿದೆ.
ಯುಎಸ್ ಅಧ್ಯಕ್ಷ ಜೋ ಬೈಡನ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಶಾಂತಿ ಕಾಪಾಡುವಂತೆ ಒತ್ತಾಯಿಸಿದ ಒಂದು ದಿನದ ನಂತರ ಮತ್ತು ಈಜಿಪ್ಟ್, ಕತಾರ್ ಮತ್ತು ವಿಶ್ವಸಂಸ್ಥೆಯ ಮಧ್ಯಸ್ಥಿಕೆ ಮಧ್ಯೆ ಈ ಬೆಳವಣಿಗೆ ಸಂಭವಿಸಿದೆ.
ಕದನ ವಿರಾಮವು ಪರಸ್ಪರ ಮತ್ತು ಏಕಕಾಲದಲ್ಲಿ ನಡೆಯಲಿದೆ ಎಂದು ಹಮಾಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಒಪ್ಪಂದ ಪ್ರಾರಂಭವಾದ ಕೂಡಲೇ ಪ್ಯಾಲೆಸ್ಟೀನಿಯಾದವರು ಗಾಜಾದ ಬೀದಿಗಳಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ಎರಡೂ ಸಂಘರ್ಷದಲ್ಲಿ ಜಯ ಸಾಧಿಸಿದ್ದಾಗಿ ಹೇಳಿಕೊಂಡಿವೆ.
ಕದನ ವಿರಾಮವನ್ನು ಮೇಲ್ವಿಚಾರಣೆ ಮಾಡಲು ಎರಡು ನಿಯೋಗಗಳನ್ನು ಕಳುಹಿಸುವುದಾಗಿ ಈಜಿಪ್ಟ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.