ನವದೆಹಲಿ: ಭಯಾನಕ ಕೊರೋನಾವೈರಸ್ ವಿರುದ್ಧ ನಡೆಯುತ್ತಿರುವ ಹೋರಾಟದ ನಡುವೆ, ಒಂದೇ ದಿನದಲ್ಲಿ ಅತಿ ಹೆಚ್ಚು ಅಂದರೆ 20 ಲಕ್ಷ ಕೋವಿಡ್ -19 ಪರೀಕ್ಷೆಗಳನ್ನು ನಡೆಸುವ ಮೂಲಕ ದೇಶವು ಮತ್ತೊಂದು ಹೆಗ್ಗುರಿತನ ಸಾಧನೆಯನ್ನು ಮಾಡಿದೆ . ಇಷ್ಟು ಸಂಖ್ಯೆಯ ಪರೀಕ್ಷೆ ಹೊಸ ಜಾಗತಿಕ ದಾಖಲೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.
ದೈನಂದಿನ ಕೋವಿಡ್ ಚೇತರಿಕೆಗಳು ಸತತ ಆರನೇ ದಿನದ ದೈನಂದಿನ ಹೊಸ ಪ್ರಕರಣಗಳನ್ನು ಮೀರುತ್ತಿರುವ ಸಮಯದಲ್ಲಿ ಈ ಸಾಧನೆಯನ್ನು ಭಾರತ ದಾಖಲಿಸಿದೆ.
“ಕಳೆದ 24 ಗಂಟೆಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದೆ. ಭಾರತದಲ್ಲಿ ಒಂದೇ ದಿನದಲ್ಲಿ ನಡೆಸಿದ ಅತಿ ಹೆಚ್ಚು ಪರೀಕ್ಷೆ ಇದು, ದೈನಂದಿನ ಪಾಸಿಟಿವ್ ಪ್ರಮಾಣವು ಶೇಕಡಾ 13.31 ಕ್ಕೆ ಇಳಿದಿದೆ” ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
“ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ನಡೆಸಿದ 20.08 ಲಕ್ಷ ಪರೀಕ್ಷೆಗಳು ಸಹ ಜಾಗತಿಕ ದಾಖಲೆಯಾಗಿದೆ” ಎಂದು ಸಚಿವಾಲಯ ತಿಳಿಸಿದೆ.
India conducted 𝟐 𝐦𝐢𝐥𝐥𝐢𝐨𝐧 𝐭𝐞𝐬𝐭𝐬 across the country yesterday! The highest number of tests conducted globally in a single day. This has been made possible by the tireless work of laboratory staff and partners! @MoHFW_INDIA @PMOIndia #CoronaUpdatesInIndia #COVID19 pic.twitter.com/1x6tfXicZb
— ICMR (@ICMRDELHI) May 19, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.