ವಾಷಿಂಗ್ಟನ್: ಕೋವಿಡ್-19 ಎರಡನೇ ಅಲೆ ವಿರುದ್ಧ ಭಾರತ ಹೋರಾಟವನ್ನು ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನಗಳು ಶ್ಲಾಘನೀಯ ಎಂದು ಅಮೆರಿಕದ ಸಂಸದರೊಬ್ಬರು ತಿಳಿಸಿದ್ದಾರೆ. ಅಲ್ಲದೆ, ಆದಷ್ಟು ಬೇಗ ಭಾರತ ಈ ಸವಾಲನ್ನು ಮೆಟ್ಟಿನಿಂತು ಜಯ ಸಾಧಿಸಲಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
“ಅಮೆರಿಕ ಮತ್ತು ಭಾರತ ವಿಶೇಷವಾದ ಪಾಲುದಾರಿಕೆಯನ್ನು ಹೊಂದಿದೆ. ಕೊರೋನಾವನ್ನು ಎದುರಿಸುವ ಸಲುವಾಗಿ ಭಾರತಕ್ಕೆ ಅಗತ್ಯವಾದ ಎಲ್ಲಾ ಸಾಧನಗಳನ್ನು ಪೂರೈಸಲು ಅಮೆರಿಕ ಪ್ರಯತ್ನಿಸುತ್ತಿದೆ. ಇದಕ್ಕೆ ನಮ್ಮ ಬೆಂಬಲವಿದೆ” ಎಂದು ಅಮೆರಿಕ ಸಂಸದರು ವಿಲ್ಸನ್ ಅವರು ಹೇಳಿದ್ದಾರೆ.
“ಭೀಕರವಾದ ರೀತಿಯಲ್ಲಿ ಕೋವಿಡ್ಗೆ ತುತ್ತಾಗಿರುವ ಭಾರತೀಯರ ಮೇಲೆ ನಮಗೆ ಅನುಕಂಪವಿದೆ. ಹೃದಯವಿದ್ರಾವಕ ಬಿಕ್ಕಟ್ಟನ್ನು ಎದುರಿಸಲು ಮೋದಿ ಅವರು ಕೈಗೊಳ್ಳುತ್ತಿರುವ ಕ್ರಮಗಳು ನಿಜಕ್ಕೂ ಪ್ರಶಂಸನೀಯ” ಎಂದಿದ್ದಾರೆ.
“ಭಾರತೀಯ ಅಮೆರಿಕನ್ ಇಂಟರ್ನ್ಯಾಷನಲ್ ಚೇಂಬರ್ ಆಫ್ ಕಾಮರ್ಸ್ ಭಾರತಕ್ಕೆ ಬಿಕ್ಕಟ್ಟನ್ನು ಎದುರಿಸಲು ನೆರವಾಗುತ್ತದೆ. ನಾನಾ ರೀತಿಯಲ್ಲಿ ಭಾರತಕ್ಕೆ ಬೇಕಾದ ನೆರವುಗಳನ್ನು ಅದರ ಸದಸ್ಯರು ಒದಗಿಸುತ್ತಿದ್ದಾರೆ” ಎಂದು ವಿಲ್ಸನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.