https://chat.whatsapp.com/BKucwX3HbX4J90X4VL22yG
News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
×
Home About Us Advertise With s Contact Us

ಈದ್-ಉಲ್-ಫಿತರ್ ಅಂಗವಾಗಿ ಗಡಿಯಲ್ಲಿ ಪರಸ್ಪರ ಸಿಹಿ ಹಂಚಿದ ಭಾರತ-ಪಾಕ್‌ ಸೇನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಪೂಂಚ್-ರಾವಲಕೋಟ್ ಕ್ರಾಸಿಂಗ್ ಪಾಯಿಂಟ್ ಮತ್ತು ಮೆಂಧರ್-ಹಾಟ್ಸ್‌ಪ್ರಿಂಗ್ ಕ್ರಾಸಿಂಗ್ ಪಾಯಿಂಟ್‌ನ ಗಡಿ  ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಭಾರತೀಯ ಸೇನೆ ಮತ್ತು ಪಾಕಿಸ್ಥಾನ ಸೇನೆಯು ಈದ್-ಉಲ್-ಫಿತರ್  ಅಂಗವಾಗಿ ಪರಸ್ಪರ ಸಿಹಿ ಹಂಚಿದೆ.

ಸೌಹಾರ್ದತೆ ಮತ್ತು ಹಬ್ಬಗಳ ವಾತಾವರಣದಲ್ಲಿ ಎರಡೂ ಸೇನೆಯ ಪ್ರತಿನಿಧಿಗಳು ಸಿಹಿತಿಂಡಿಗಳು ಮತ್ತು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಈ ಸಮಾರಂಭವನ್ನು ಎರಡೂ ದೇಶಗಳ ನಡುವೆ ಇತ್ತೀಚೆಗೆ ಒಪ್ಪಿತವಾದ ಕದನ ವಿರಾಮದ ಹಿನ್ನೆಲೆಯಲ್ಲಿ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಕ್ರಮವಾಗಿ ನೋಡಲಾಗಿದೆ. ಈ ಸಾಂಕೇತಿಕ ಕ್ರಮವನ್ನು ಎರಡೂ ಸೈನ್ಯಗಳು ಮೆಚ್ಚಿಕೊಂಡಿವೆ, ಇದು ಸದ್ಭಾವನೆ ಮತ್ತು ಪರಸ್ಪರ ನಂಬಿಕೆಯನ್ನು ಉತ್ತೇಜಿಸುವ ನಿರೀಕ್ಷೆಯಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

 

Recent News

Back To Top