ಮಂಗಳೂರು: ಕೊರೋನಾ ಸಂಕಷ್ಟದ ಸನ್ನಿವೇಶದಲ್ಲಿ ಕೊರೋನಾ ಸೋಂಕಿತರ ನೆರವಿಗಾಗಿ RSS ನ ಸೇವಾ ಭಾರತಿ ನೇತೃತ್ವದಲ್ಲಿ ದೇಶದೆಲ್ಲೆಡೆ ಸೇವಾ ಕೇಂದ್ರಗಳನ್ನು ತೆರೆಲಾಗಿದ್ದು, ಬಂಟ್ವಾಳದಲ್ಲಿಯೂ ಈ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ.
ಬಂಟ್ವಾಳದಲ್ಲಿ ಕೊರೋನಾ ಆಪತ್ತಿಗೆ ತುತ್ತಾಗಿದ್ದ ಮುಸ್ಲಿಂ ಕುಟುಂಬದಿಂದ ಕರೆ ಬಂದ ತಕ್ಷಣವೇ, ಸೋಂಕಿಗೆ ತುತ್ತಾಗಿದ್ದ ಆ ಕುಟುಂಬದ ಮಹಿಳೆಯೋರ್ವರನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಅವರನ್ನು ಮತ್ತೆ ಮನೆಗೆ ತಲುಪಿಸುವ ಕೆಲಸವನ್ನು ಮಾಡಿ ಇದೀಗ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಜಾತಿ, ಧರ್ಮ, ಮತಗಳ ಬೇಧವಿಲ್ಲದೆ ಆಪತ್ತಿನಲ್ಲಿರುವವರ ಸಂರಕ್ಷಣೆಗೆ ಮುಂದಾಗಿರುವ ಸೇವಾ ಭಾರತಿ ತಂಡದ ಈ ಕ್ರಮ ಎಲ್ಲರಿಗೂ ಮಾದರಿಯಾಗಿದೆ. ದೇಶದಲ್ಲಿ ಯಾವುದೇ ರೀತಿಯ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಿಸ್ವಾರ್ಥ ಮನೋಭಾವದಿಂದ ದುಡಿಯುವ RSS ಸ್ವಯಂಸೇವಕರು ಈ ಕೊರೋನಾ ಸಂದರ್ಭದಲ್ಲಿಯೂ ತಮ್ಮ ಜೀವವನ್ನೇ ಪಣಕ್ಕಿಟ್ಟು ಯಾವುದೇ ಭೇದಭಾವವಿಲ್ಲದೇ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದಕ್ಕೆ ಬಂಟ್ವಾಳದ ಮುಸ್ಲಿಂ ಕುಟುಂಬಕ್ಕೆ ನೀಡಿದ ನೆರವು ಸಾಕ್ಷ್ಯ ನುಡಿಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.