ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸಿದ 1,50,000 ಯುನಿಟ್ಗಳ ‘ಆಕ್ಸಿಕೇರ್’ ವ್ಯವಸ್ಥೆಯನ್ನು 322.5 ಕೋಟಿ ರೂ.ಗಳ ವೆಚ್ಚದಲ್ಲಿ ಖರೀದಿಸಲು ಪಿಎಂ ಕೇರ್ಸ್ ಫಂಡ್ ಅನುಮತಿ ನೀಡಿದೆ.
ಆಕ್ಸಿಕೇರ್ ಎನ್ನುವುದು ಎಸ್ಪಿಒ 2 ಆಧಾರಿತ ಆಮ್ಲಜನಕ ಪೂರೈಕೆ ವ್ಯವಸ್ಥೆಯಾಗಿದ್ದು, ಇದು ಸಂವೇದನಾಶೀಲ ಎಸ್ಪಿಒ 2 ಮಟ್ಟವನ್ನು ಆಧರಿಸಿ ರೋಗಿಗಳಿಗೆ ಆಮ್ಲಜನಕವನ್ನು ನೀಡುವುದನ್ನು ನಿಯಂತ್ರಿಸುತ್ತದೆ. ಈ ಅನುಮೋದನೆಯಡಿಯಲ್ಲಿ, 1,00,000 ಮ್ಯಾನುವಲ್ ಮತ್ತು 50,000 ಸ್ವಯಂಚಾಲಿತ ಆಕ್ಸಿಕೇರ್ ವ್ಯವಸ್ಥೆಗಳೊಂದಿಗೆ ನಾನ್ ರಿಬ್ರೀಥರ್ ಮುಖಗವಸುಗಳನ್ನು ಖರೀದಿಸಲಾಗುತ್ತಿದೆ.
ಆಕ್ಸಿಕೇರ್ ವ್ಯವಸ್ಥೆಯು ಎಸ್ಪಿಒ 2 ಮಟ್ಟವನ್ನು ಆಧರಿಸಿ ಪೂರಕ ಆಮ್ಲಜನಕವನ್ನು ನೀಡುತ್ತದೆ ಮತ್ತು ವ್ಯಕ್ತಿಯು ಹೈಪೋಕ್ಸಿಯಾ ಸ್ಥಿತಿಗೆ ಹೋಗದಂತೆ ತಡೆಯುತ್ತದೆ. ಈ ವ್ಯವಸ್ಥೆಯನ್ನು ಡಿಆರ್ಡಿಒದ ಬೆಂಗಳೂರಿನ ಡಿಫೆನ್ಸ್ ಬಯೋ-ಎಂಜಿನಿಯರಿಂಗ್ ಆಂಡ್ ಎಲೆಕ್ಟ್ರೋ ಮೆಡಿಕಲ್ ಲ್ಯಾಬೊರೇಟರಿ (ಡೆಬೆಲ್)ಯು ಕಠಿಣ ಪ್ರದೇಶಗಳಲ್ಲಿ ನಿಯೋಜಿತರಾಗಿರುವ ಯೋಧರಿಗಾಗಿ ಅಭಿವೃದ್ಧಿಪಡಿಸಿದೆ. ಆಸ್ಪತ್ರೆಗಳಲ್ಲಿ ಇದನ್ನು ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿ ಬಳಸಬಹುದು.
ಡಿಆರ್ಡಿಒ ತಂತ್ರಜ್ಞಾನವನ್ನು ಭಾರತದ ಅನೇಕ ಕೈಗಾರಿಕೆಗಳಿಗೆ ವರ್ಗಾಯಿಸಲಾಗಿದ್ದು, ಅದು ಆಕ್ಸಿಕೇರ್ ವ್ಯವಸ್ಥೆಗಳನ್ನು ಉತ್ಪಾದಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.