ನವದೆಹಲಿ: ಭಾರತದಲ್ಲಿ ಕೋವಿಡ್-19 ಬಿಕ್ಕಟ್ಟನ್ನು ಎದುರಿಸಲು ಸಹಾಯ ಮಾಡುವ ಸಲುವಾಗಿ ಟ್ವಿಟರ್ 15 ಮಿಲಿಯನ್ ಡಾಲರ್ ದೇಣಿಗೆ ನೀಡಿದೆ.
ಟ್ವಿಟರ್ ಸಿಇಒ ಜ್ಯಾಕ್ ಪ್ಯಾಟ್ರಿಕ್ ಡಾರ್ಸಿ ಮೇ 10 ರಂದು ಈ ಬಗ್ಗೆ ಟ್ವೀಟ್ ಮಾಡಿದ್ದು, ಈ ಮೊತ್ತವನ್ನು ಮೂರು ಸರ್ಕಾರೇತರ ಸಂಸ್ಥೆಗಳಾದ ಕೇರ್, ಏಡ್ ಇಂಡಿಯಾ ಮತ್ತು ಸೇವಾ ಇಂಟರ್ನ್ಯಾಷನಲ್ ಯುಎಸ್ಎಗಳಿಗೆ ನೀಡಲಾಗಿದೆ. ಕೇರ್ಗೆ 10 ಮಿಲಿಯನ್ ಯುಎಸ್ಡಿ ನೀಡಲಾಗಿದೆ, ಏಡ್ ಇಂಡಿಯಾ ಮತ್ತು ಸೇವಾ ಇಂಟರ್ನ್ಯಾಷನಲ್ ಯುಎಸ್ಎಗೆ ತಲಾ 2.5 ಮಿಲಿಯನ್ ಯುಎಸ್ಡಿ ನೀಡಲಾಗಿದೆ” ಎಂದಿದ್ದಾರೆ.
ಸೇವಾ ಇಂಟರ್ನ್ಯಾಷನಲ್ ಹಿಂದೂ ನಂಬಿಕೆ ಆಧಾರಿತ, ಮಾನವೀಯ, ಲಾಭರಹಿತ ಸೇವಾ ಸಂಸ್ಥೆಯಾಗಿದೆ. ಇದು ಆರ್ಎಸ್ಎಸ್ ಎನ್ಜಿಒ ಆಗಿದೆ. ಈ ಅನುದಾನವು ಜೀವ ಉಳಿಸುವ ಸಾಧನಗಳಾದ ಆಮ್ಲಜನಕ ಸಾಂದ್ರಕಗಳು, ವೆಂಟಿಲೇಟರ್ಗಳು, ಬೈಪಾಪ್ (ಬಿಲೆವೆಲ್ ಪಾಸಿಟಿವ್ ಏರ್ವೇ ಪ್ರೆಶರ್) ಮತ್ತು ಸಿಪಿಎಪಿ ಯಂತ್ರಗಳನ್ನು ಖರೀದಿಸಲು ಸೇವಾ ಇಂಟರ್ನ್ಯಾಷನಲ್ಗೆ ಸಹಕಾರಿಯಾಗಲಿದೆ. ಈಗಾಗಲೇ ಈ ಸಂಸ್ಥೆ ಭಾರತದಲ್ಲಿ ಎದುರಿಸಲು ಸಾಕಷ್ಟು ನೆರವಿನ ಹಸ್ತವನ್ನು ನೀಡಿದೆ.
ಕೇರ್ ಜಾಗತಿಕ ಬಡತನದ ವಿರುದ್ಧ ಹೋರಾಡುವ ಪ್ರಮುಖ ಮಾನವೀಯ ಸಂಘಟನೆಯಾಗಿದೆ. ಭಾರತಕ್ಕೆ ಕೋವಿಡ್ ಎದುರಿಸಲು ಇದು ಸಾಕಷ್ಟು ಸಹಾಯ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.