News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
×
Home About Us Advertise With s Contact Us

ಬಹ್ರೈನ್‌ನಿಂದ ಮಂಗಳೂರಿಗೆ ತಲುಪಿದ 40 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತ ಹಡಗು

ಮಂಗಳೂರು: ಐಎನ್‌ಎಸ್ ತಲ್ವಾರ್ ಹಡಗಿನ ಮುಖೇನ ಭಾರತಕ್ಕೆ ಬಹ್ರೈನ್‌ನಿಂದ 40 ಮೆಟ್ರಿಕ್ ಟನ್ ಆಕ್ಸಿಜನ್ ಮಂಗಳೂರು ಬಂದರಿಗೆ ಬಂದು ತಲುಪಿದೆ.

ಬಹ್ರೈನ್‌ನ ಮನಾಮ ಬಂದರಿನಿಂದ ಈ ಹಡಗು ಭಾರತದತ್ತ ಪ್ರಯಾಣ ಬೆಳೆಸಿದ್ದು, 2 ಕಂಟೈನರ್‌ಗಳಲ್ಲಿ 40 ಮೆ. ಟನ್ ಆಮ್ಲಜನಕ‌ವನ್ನು ಮಂಗಳೂರಿಗೆ ತಲುಪಿಸಿದೆ. ಅದರೊಂದಿಗೆ ಇನ್ನಿತರ ವೈದ್ಯಕೀಯ ಉಪಕರಣಗಳನ್ನು ಸಹ ಈ ಹಡಗಿನ ಮುಖಾಂತರ ಬಹ್ರೈನ್‌ ಭಾರತಕ್ಕೆ ತಲುಪಿಸಿದೆ.

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೋನಾ ವಿರುದ್ಧದ ಹೋರಾಟಕ್ಕೆ ಭಾರತದ ಜೊತೆಗೆ ವಿಶ್ವದ ಅನೇಕ ರಾಷ್ಟ್ರಗಳು ಕೈಜೋಡಿಸುತ್ತಿವೆ. ಅದರಂತೆ ಇದೀಗ ಬಹ್ರೈನ್‌ ಸಹ ಭಾರತಕ್ಕೆ ನೆರವಿನ ಹಸ್ತ ಚಾಚಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

 

Recent News

Back To Top