ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಜೋರಾಗಿದ್ದು, ಈ ನಡುವೆಯೇ ಅಧಿಕಾರಿಗಳು ಬೆಡ್ ಬುಕ್ಕಿಂಗ್ ದಂಧೆಯಲ್ಲಿ ತೊಡಗಿಸಿಕೊಂಡಿರುವ ಕರಾಳ ಸತ್ಯವನ್ನು ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಬಯಲಿಗೆಳೆದಿದ್ದಾರೆ.
ಕೊರೋನಾ ಸೋಂಕಿಗೆ ತುತ್ತಾಗಿರುವ ರೋಗಿಗಳ ಹೆಸರಿನಲ್ಲಿ, ಈಗಾಗಲೇ ಐಸೋಲೇಶನ್ ಆಗಿರುವ ರೋಗಿಗಳ ಹೆಸರಿನಲ್ಲಿ ಬೆಡ್ ಬ್ಲಾಕಿಂಗ್ ಮಾಡಲಾಗುತ್ತಿದ್ದು, ಇದರಲ್ಲಿ ಬಿಬಿಎಂಪಿ ಅಧಿಕಾರಿಗಳು ಭಾಗಿಯಾಗಿರುವುದು ಕಂಡುಬಂದಿದೆ. ಮನೆಯಲ್ಲೇ ಇರುವವರ ಹೆಸರಿನಲ್ಲಿಯೂ ಬೆಡ್ಗಳನ್ನು ಬುಕ್ ಮಾಡುವ ಮೂಲಕ ದಂಧೆ ನಡೆಸುತ್ತಿದ್ದಾರೆ. ಹಣಕ್ಕಾಗಿ ಈ ಅಕ್ರಮ ಎಸಗುತ್ತಿರುವ ಅಧಿಕಾರಿಗಳ ಈ ಕಳ್ಳಾಟವನ್ನು ತೇಜಸ್ವಿ ಸೂರ್ಯ ಜಗಜ್ಜಾಹೀರು ಮಾಡಿದ್ದಾರೆ.
ಹಾಗೆಯೇ ಒಂದೇ ವ್ಯಕ್ತಿಯ ಹೆಸರಿನಲ್ಲಿ ಅನೇಕ ಆಸ್ಪತ್ರೆಗಳಲ್ಲಿ ಬೆಡ್ ಬುಕ್ ಆಗುತ್ತವೆ. ರಾತ್ರಿ ವೇಳೆಯೂ ಆಸ್ಪತ್ರೆಗಳಿಗೆ ದಾಖಲಾದ ಬಗ್ಗೆ ದಾಖಲೆಗಳಿವೆ. ಇಂತಹ ದಂಧೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಯಡಿಯೂರಪ್ಪ ಅವರು ಸಹ ಭರವಸೆ ನೀಡಿದ್ದಾಗಿ ತಿಳಿಸಿದ್ದಾರೆ.
ವಿಐಪಿಗಳ ಹೆಸರಿನಲ್ಲೂ ಬೆಡ್ ಬುಕ್ಕಿಂಗ್ ಆಗಿದ್ದು, ಬ್ಲಾಕ್ ಮಾಡಲಾದ ಬೆಡ್ಗಳನ್ನು ಅಧಿಕ ಹಣಕ್ಕೆ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಆ ಮೂಲಕ ಜನಸಾಮಾನ್ಯರ ಸಹಾಯಕ್ಕೆ ಬರಬೇಕಿದ್ದ ಸೌಲಭ್ಯಗಳನ್ನು ಅಧಿಕಾರಿಗಳೇ ತಮ್ಮ ಹಣದಾಹಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳ ಕಳ್ಳಾಟವನ್ನು ಸಂಸದ ತೇಜಸ್ವಿ ಸೂರ್ಯ ಬಯಲಿಗೆ ತಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.