ಹೈದರಾಬಾದ್: ಲಸಿಕೆಗಳನ್ನು ಪ್ರಾಯೋಗಿಕವಾಗಿ ತಲುಪಿಸಲು ಡ್ರೋನ್ಗಳನ್ನು ಬಳಸಲು ತೆಲಂಗಾಣ ಸರ್ಕಾರಕ್ಕೆ ನಾಗರಿಕ ವಿಮಾನಯಾನ ಸಚಿವಾಲಯ ಶುಕ್ರವಾರ ಅನುಮತಿ ನೀಡಿದೆ. ಈ ಪ್ರಾಯೋಗಿಕ ವಿತರಣೆಯು ಯಾವ ನಿರ್ದಿಷ್ಟ ಲಸಿಕೆಯ ಭಾಗವಾಗಲಿದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿಲ್ಲ.
“ದೃಷ್ಟಿ ವ್ಯಾಪ್ತಿಯ ಒಳಗೆ ಡ್ರೋನ್ಗಳನ್ನು ಬಳಸಿಕೊಂಡು ಲಸಿಕೆಗಳನ್ನು ಪ್ರಾಯೋಗಿಕವಾಗಿ ವಿತರಿಸುವುದಕ್ಕಾಗಿ 2021 ರ ಮಾನವರಹಿತ ವಿಮಾನ ವ್ಯವಸ್ಥೆ (ಯುಎಎಸ್) ನಿಯಮಗಳಿಂದ ತೆಲಂಗಾಣ ಸರ್ಕಾರಕ್ಕೆ ಷರತ್ತುಬದ್ಧ ವಿನಾಯಿತಿ ನೀಡಲಾಗಿದೆ” ಎಂದು ಸಚಿವಾಲಯ ಟ್ವಿಟರ್ನಲ್ಲಿ ತಿಳಿಸಿದೆ.
ಈ ವಿನಾಯಿತಿ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಮಾನ್ಯವಾಗಿರುತ್ತದೆ ಎಂದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.