ನವದೆಹಲಿ: ಭಾರತದಲ್ಲಿ ಕೋವಿಡ್-19 ಪರಿಹಾರ ಕಾರ್ಯಗಳಿಗಾಗಿ ಸುಮಾರು 8 ಮಿಲಿಯನ್ ಯುಎಸ್ಡಿ ಹಣವನ್ನು ಸಂಗ್ರಹಿಸಿರುವ ಹೂಸ್ಟನ್ ಮೂಲದ ಭಾರತೀಯ-ಅಮೇರಿಕನ್ ಲಾಭೇತರ ಸಂಸ್ಥೆ ಸೇವಾ ಇಂಟರ್ನ್ಯಾಷನಲ್, ಅಟ್ಲಾಂಟಾದಿಂದ 2,184 ಆಮ್ಲಜನಕ ಸಾಂದ್ರಕಗಳ ಮೊದಲ ಬ್ಯಾಚ್ ಅನ್ನು ದೆಹಲಿಗೆ ರವಾನಿಸಿದೆ.
ಸಂಸ್ಥೆಯು ತನ್ನ ಸೋಶಿಯಲ್ ಮೀಡಿಯಾ ಫಂಡ್ ರೈಸಿಂಗ್ ಗುರಿಯನ್ನು ಹಿಂದಿನ 5 ಮಿಲಿಯನ್ ಡಾಲರ್ನಿಂದ ಈಗ 10 ಮಿಲಿಯನ್ ಡಾಲರ್ಗೆ ಹೆಚ್ಚಿಸಿದೆ. ಆಮ್ಲಜನಕ ಸಾಂದ್ರಕಗಳು ಗುರುವಾರ ಅಟ್ಲಾಂಟಾದಿಂದ ನವದೆಹಲಿಗೆ ವಿಮಾನದ ಮೂಲಕ ಹೊರಟವು ಎಂದು ಸೇವಾ ಹೇಳಿದೆ. ಯುನೈಟೆಡ್ ಪಾರ್ಸೆಲ್ ಸರ್ವಿಸ್ (ಯುಪಿಎಸ್) ಫೌಂಡೇಶನ್ ಸರಕುಗಳನ್ನು ಉಚಿತವಾಗಿ ಸಾಗಿಸುತ್ತಿದೆ.
ಈ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಭಾರತಕ್ಕೆ ಸಹಾಯ ಮಾಡಲು ಭಾರತೀಯ-ಅಮೆರಿಕನ್ನರ ದೇಣಿಗೆಯನ್ನು ಬಳಸಿಕೊಂಡು ಆಮ್ಲಜನಕ ಸಾಂದ್ರಕಗಳನ್ನು ಸಂಗ್ರಹಿಸಲಾಗಿದೆ ಎಂದು ಸೇವಾ ಇಂಟರ್ನ್ಯಾಷನಲ್ ವಕ್ತಾರ ಗೀತೇಶ್ ದೇಸಾಯಿ ಹೇಳಿದ್ದಾರೆ.
“ಆಂಬುಲೆನ್ಸ್ ಸೇವೆಗಳು, ಆಸ್ಪತ್ರೆಯ ಹಾಸಿಗೆ ಲಭ್ಯತೆ ಮತ್ತು ಜನರಿಗೆ ರಕ್ತ ಮತ್ತು ಔಷಧೀಯ ಸರಬರಾಜುಗಳ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಒದಗಿಸಲು ಸೇವಾ ಡಿಜಿಟಲ್ ಹೆಲ್ಪ್ಡೆಸ್ಕ್ ನಿರ್ಮಿಸುವ ಪ್ರಕ್ರಿಯೆಯಲ್ಲಿದೆ” ಎಂದು ದೇಸಾಯಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.