ನವದೆಹಲಿ: ಡಿಆರ್ಡಿಓ ಸಂಸ್ಥೆ ಎಲ್ಸಿಎ ತೇಜಸ್ ಯುದ್ಧ ವಿಮಾನಕ್ಕೆ ಆನ್ – ಬೋರ್ಡ್ ಆಕ್ಸಿಜನ್ ಉತ್ಪಾದಿಸಲು ತಯಾರಿಸಿರುವ ʼಮೆಡಿಕಲ್ ಆಕ್ಸಿಜನ್ ಪ್ಲಾಂಟ್ (ಎಂಒಪಿ)ʼ ತಂತ್ರಜ್ಞಾನವನ್ನು ಈಗ ಕೋವಿಡ್-19 ರೋಗಿಗಳ ಆಮ್ಲಜನಕದ ಕೊರತೆ ನೀಗಿಸುವ ಸಲುವಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಮೂರು ತಿಂಗಳ ಅವಧಿಯಲ್ಲಿ ಪಿಎಂ ಕೇರ್ಸ್ ಫಂಡ್ ಅಡಿಯಲ್ಲಿ ಡಿಆರ್ಡಿಓ 500 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾನೆ ಮಾಡಲು ನಿರ್ಧರಿಸಿದೆ. ಆಮ್ಲಜನಕ ಘಟಕವು ನಿಮಿಷಕ್ಕೆ 1,000 ಲೀಟರ್ (ಎಲ್ಪಿಎಂ) ಸಾಮರ್ಥ್ಯದ ಆಮ್ಲಜನಕ ಉತ್ಪಾದಿಸಲು ವಿನ್ಯಾಸಗೊಳಿಸಲಾಗುತ್ತಿದೆ. ಈ ವ್ಯವಸ್ಥೆಯು 5 ಎಲ್ಪಿಎಂ ಹರಿವಿನ ದರದಲ್ಲಿ 190 ರೋಗಿಗಳಿಗೆ ಆಮ್ಲಜನಕ ಪೂರೈಸುತ್ತದೆ ಮತ್ತು ದಿನಕ್ಕೆ 195 ಸಿಲಿಂಡರ್ಗಳನ್ನು ಚಾರ್ಜ್ ಮಾಡಬಲ್ಲದು.
ತಂತ್ರಜ್ಞಾನದ ವರ್ಗಾವಣೆಯನ್ನು ಬೆಂಗಳೂರಿನ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಮತ್ತು ಮೆ / ಟ್ರೈಡೆಂಟ್ ನ್ಯೂಮ್ಯಾಟಿಕ್ಸ್ ಪ್ರೈ. ಲಿಮಿಟೆಡ್, ಕೊಯಮತ್ತೂರುಗೆ ಮಾಡಲಾಗಿದೆ. ಇವು ದೇಶದ ವಿವಿಧ ಆಸ್ಪತ್ರೆಗಳಲ್ಲಿ 380 ಸ್ಥಾವರಗಳನ್ನು ಸ್ಥಾಪಿಸಲಿದ್ದಾರೆ. ಸಿಎಸ್ಐಆರ್ಗೆ ಸೇರಿದ ಡೆಹ್ರಾಡೂನ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂನಲ್ಲಿ ಕೆಲಸ ಮಾಡುವ ಕೈಗಾರಿಕೆಗಳು 500 ಎಲ್ಪಿಎಂ ಸಾಮರ್ಥ್ಯದ 120 ಸ್ಥಾವರಗಳಲ್ಲಿ ಆಮ್ಲಜನಕ ಉತ್ಪಾದಿಸಲಿವೆ.
DRDO to set up 500 Medical Oxygen Plants within three months under PM CARES Fund https://t.co/wr2nLcjBLK
— DRDO (@DRDO_India) April 28, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.