ಮಂಗಳೂರು: ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕಿನ ನಿಯಂತ್ರಣಕ್ಕಾಗಿ ಸರಕಾರ ಕೈಗೊಂಡ ಲಾಕ್ ಡೌನ್ ನಿರ್ಧಾರದಿಂದಾಗಿ ಮನೆಗೆ ತೆರಳದೆ ಬಾಕಿ ಉಳಿದ ಕಾರ್ಮಿಕರಿಗೆ, ನಿರ್ಗತಿಕರಿಗೆ ಮಂಗಳೂರು ನಗರ ದಕ್ಷಿಣ ಶಾಸಕರಾದ ವೇದವ್ಯಾಸ್ ಕಾಮತ್ ಅವರು ಅನ್ನ ಆಹಾರದ ವ್ಯವಸ್ಥೆ ಕಲ್ಪಿಸಿ ಮಾದರಿಯಾಗಿದ್ದಾರೆ.
ಕಳೆದ ವಾರ ಸರ್ಕಾರ ಘೋಷಿಸಿದ ವಾರಂತ್ಯದ ಕರ್ಫ್ಯೂ ಮತ್ತು ಇವತ್ತಿನಿಂದ ಆರಂಭವಾದ 14 ದಿನಗಳ ಕಾಲದ ಲಾಕ್ ಡೌನ್ ವರೆಗೆ ಮಂಗಳೂರು ನಗರದಾದ್ಯಂತ ಈ ಸೇವೆ ದೊರಕಲಿದೆ.
ಶಾಸಕ ವೇದವ್ಯಾಸ್ ಕಾಮತ್ ಅವರ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಮೂಲಕ ಪ್ರತಿನಿತ್ಯ 1500 ಜನರಿಗೆ ಮಧ್ಯಾಹ್ನ ಹಾಗೂ ರಾತ್ರಿಯ ಊಟದ ವ್ಯವಸ್ಥೆ ಮಾಡಲಾಗಿದೆ. ಟೆಂಪೋಗಳಲ್ಲಿ ಆಹಾರ ತುಂಬಿಸಿಕೊಂಡು ಬಸ್ ನಿಲ್ದಾಣ, ಮಾರ್ಕೆಟ್ ಬಳಿ ಇರುವ ನಿರ್ಗತಿಕರನ್ನು ಗುರುತಿಸಿ ಈ ಸೇವೆ ಮಾಡಲಾಗುತ್ತಿದೆ.
ಇದರ ಜೊತೆಗೆ ಲಾಕ್ ಡೌನ್ ಕರ್ತವ್ಯದಲ್ಲಿರುವ ಪೋಲಿಸ್ ಸಿಬ್ಬಂದಿಗಳಿಗೂ ಕೂಡ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.