ದುಬೈ: ಕೋವಿಡ್-19 ಬಿಕ್ಕಟ್ಟು ಎದುರಿಸುತ್ತಿರು ಭಾರತಕ್ಕೆ ಒಗ್ಗಟ್ಟನ್ನು ತೋರಿಸುವ ಸಲುವಾಗಿ ಯುಎಇಯಲ್ಲಿ ಬುರ್ಜ್ ಖಲೀಫಾ ಸೇರಿದಂತೆ ಪ್ರಮುಖ ಕಟ್ಟಡಗಳು ತ್ರಿವರ್ಣದೊಂದಿಗೆ ಬೆಳಗಿವೆ.
ಭಾರತದ ಒಟ್ಟು ಕೋವಿಡ್-19 ಪ್ರಕರಣಗಳು 1,73,13,163 ಕ್ಕೆ ಏರಿದ್ದರೆ, ಸಕ್ರಿಯ ಪ್ರಕರಣಗಳು 28 ಲಕ್ಷ ದಾಟಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಸೋಮವಾರ ಸಾವಿನ ಸಂಖ್ಯೆ 1,95,123 ಕ್ಕೆ ಏರಿಕೆಯಾಗಿದ್ದು, 2,812 ಹೊಸ ಸಾವುನೋವುಗಳು ದಾಖಲಾಗಿವೆ.
ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ (ಎಡಿಎನ್ಒಸಿ) ಪ್ರಧಾನ ಕಛೇರಿ ಮತ್ತು ದುಬೈನ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಭಾರತಕ್ಕೆ ಒಗ್ಗಟ್ಟನ್ನು ಪ್ರದರ್ಶಿಸಲು ಭಾರತದ ತ್ರಿವರ್ಣ ಧ್ವಜದ ಬಣ್ಣಗಳ ವಿದ್ಯುತ್ ದ್ವೀಪ ಬೆಳಗಿಸಿವೆ. ಈ ಬಗ್ಗೆ ಭಾನುವಾರ ಯುಎಇಯಲ್ಲಿನ ಭಾರತ ರಾಯಭಾರ ಕಛೇರಿ ಟ್ವಿಟ್ ಮಾಡಿದೆ.
“ಭಾರತ ಕೋವಿಡ್-19 ವಿರುದ್ಧ ಭೀಕರ ಯುದ್ಧವನ್ನು ಎದುರಿಸುತ್ತಿರುವಾಗ, ಅದರ ಸ್ನೇಹಿತ ಯುಎಇ ತನ್ನ ಹಾರೈಕೆಗಳನ್ನು ಕಳುಹಿಸುತ್ತದೆ. ದುಬೈನ ಪ್ರಜ್ವಲಿಸುವ ತಾರೆಬುರ್ಜ್ ಖಲೀಫಾ ತನ್ನ ಬೆಂಬಲವನ್ನು ಪ್ರದರ್ಶಿಸಲು ಭಾರತ ಧ್ವಜದ ಬೆಳಕು ಚೆಲ್ಲಿದೆ ”ಎಂದು ಯುಎಇಯ ಭಾರತೀಯ ರಾಯಭಾರ ಕಚೇರಿ ಭಾನುವಾರ ಟ್ವೀಟ್ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.