ನವದೆಹಲಿ: ಕೋವಿಡ್-19 ಲಸಿಕೆ ಉತ್ಪಾದನೆ ಮಾಡಲು ಭಾರತೀಯ ಲಸಿಕೆ ತಯಾರಕರಿಗೆ ಅಗತ್ಯವಾದ ಕಚ್ಚಾ ವಸ್ತುಗಳ ಮೇಲಿನ ರಫ್ತು ನಿಷೇಧವನ್ನು ತೆಗೆದುಹಾಕಲು ಯುಎಸ್ ಸರ್ಕಾರ ನಿರ್ಧರಿಸಿದೆ. ದೇಶಾದ್ಯಂತ ಕೋವಿಡ್D-19 ಸೋಂಕುಗಳು ಹೆಚ್ಚಾಗುತ್ತಿರುವ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಯುಎಸ್ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ದೂರವಾಣಿ ಸಂಭಾಷಣೆ ನಡೆಸಿದ ನಂತರ ಈ ಬೆಳವಣಿಗೆ ಸಂಭವಿಸಿದೆ.
ಈ ಸಂಕಷ್ಟದ ಕಾಲದಲ್ಲಿ ಭಾರತದೊಂದಿಗೆ ಅಮೆರಿಕದ ಒಗ್ಗಟ್ಟನ್ನು ಸುಲ್ಲಿವಾನ್ ಅವರು ದೃಢಪಡಿಸಿದ್ದಾರೆ.
ಭಾರತದ ಕೋವಿಡ್-19 ಪರಿಸ್ಥಿತಿಯ ಬಗ್ಗೆ ಹಲವಾರು ಯುಎಸ್ ಸಂಸದರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ನಿರ್ಣಾಯಕವಾದ ಸಹಾಯವನ್ನು ವಿಸ್ತರಿಸಲು, ಲಸಿಕೆಗಳನ್ನು ಮತ್ತು ಇತರ ಕಚ್ಚಾ ವಸ್ತುಗಳನ್ನು ರಫ್ತು ಮಾಡುವಂತೆ ಬೈಡೆನ್ ಆಡಳಿತದ ಮೇಲೆ ಒತ್ತಡ ಹೇರಿದ್ದಾರೆ. ಕೋವಿಶೀಲ್ಡ್ ಲಸಿಕೆಯ ಭಾರತೀಯ ತಯಾರಿಕೆಗೆ ತುರ್ತಾಗಿ ಅಗತ್ಯವಿರುವ ನಿರ್ದಿಷ್ಟ ಕಚ್ಚಾ ವಸ್ತುಗಳ ಮೂಲಗಳನ್ನು ಯುಎಸ್ ಗುರುತಿಸಿದ್ದು, ಅದು ತಕ್ಷಣವೇ ಭಾರತಕ್ಕೆ ಲಭ್ಯವಾಗಲಿದೆ ಎಂದು ಶ್ವೇತಭವನ ತಿಳಿಸಿದೆ.
ಅಮೆರಿಕದ ಆಸ್ಪತ್ರೆಗಳು ಸಾಂಕ್ರಾಮಿಕ ರೋಗದ ಆರಂಭದಲ್ಲಿ ತೊಂದರೆಗೊಳಗಾದಾಗ ಭಾರತವು ಅಮೆರಿಕನ್ನರಿಗೆ ಸಹಾಯ ಮಾಡಿದಂತೆಯೇ, ಕರೋನವೈರಸ್ ಪ್ರಕರಣಗಳ ಹೆಚ್ಚಳವನ್ನು ಎದುರಿಸಲು ಭಾರತಕ್ಕೆ ಸಹಾಯ ಮಾಡಲು ಅಮೆರಿಕ ನಿರ್ಧರಿಸಿದೆ ಎಂದು ಟ್ವೀಟ್ ನಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಇದಕ್ಕೂ ಮುನ್ನ ಏಪ್ರಿಲ್ನಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್ಐಐ) ಸಿಇಒ ಆದರ್ ಪೂನವಾಲ್ಲಾ ಅವರು ಅಮೆರಿಕದಿಂದ ಕಚ್ಚಾ ವಸ್ತುಗಳ ರಫ್ತು ನಿಷೇಧವನ್ನು ತೆಗೆದುಹಾಕುವಂತೆ ಅಮೆರಿಕ ಅಧ್ಯಕ್ಷರಿಗೆ ಮನವಿ ಮಾಡಿದ್ದರು. ಎಸ್ಐಐ ಪ್ರಸ್ತುತ ಅಸ್ಟ್ರಾಜೆನೆಕಾ-ಆಕ್ಸ್ಫರ್ಡ್ನ ಕೋವಿಶೀಲ್ಡ್ ಲಸಿಕೆ ತಯಾರಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.