ಅಹ್ಮದಾಬಾದ್: ಗುಜರಾತ್ನ ಗಾಂಧಿನಗರದಲ್ಲಿ ಮತ್ತೊಂದು 1200 ಬೆಡ್ಗಳ ಕೋವಿಡ್ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಅಹಮದಾಬಾದ್ನ ಗುಜರಾತ್ ವಿಶ್ವವಿದ್ಯಾಲಯ ಸಮಾವೇಶ ಮತ್ತು ಪ್ರದರ್ಶನ ಕೇಂದ್ರದಲ್ಲಿ ಡಿಆರ್ಡಿಒ ಮತ್ತು ಗುಜರಾತ್ ಸರ್ಕಾರ ಸ್ಥಾಪಿಸಿದ 900 ಹಾಸಿಗೆ ಮೀಸಲಾದ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಅವರು ಈ ಮಾತನ್ನು ಹೇಳಿದ್ದಾರೆ.
1200 ಹಾಸಿಗೆಯ ಮೀಸಲು ಕೋವಿಡ್ ಆಸ್ಪತ್ರೆಯನ್ನು ಗಾಂಧಿನಗರದ ಹೆಲಿಪ್ಯಾಡ್ ಮೈದಾನದಲ್ಲಿ ಸ್ಥಾಪಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಈ ಆಸ್ಪತ್ರೆಯಲ್ಲಿ 600 ಐಸಿಯು ಹಾಸಿಗೆಗಳು ಇರಲಿವೆ. ಟಾಟಾ ಟ್ರಸ್ಟ್ ಸಹಯೋಗದೊಂದಿಗೆ ಇದನ್ನು ಡಿಆರ್ಡಿಒ ಸ್ಥಾಪಿಸಲಿದೆ.
ಅಹಮದಾಬಾದ್ನಲ್ಲಿ ಐಸೋಲೇಷನ್ ಕೇಂದ್ರಗಳೂ ಇರಲಿದ್ದು, ಇದಕ್ಕಾಗಿ ಕರ್ಣಾವತಿ ಕ್ಲಬ್, ರಾಜ್ಪಾತ್ ಕ್ಲಬ್, ಅಹಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್, ಗುಜರಾತ್ ರಾಜ್ಯ ಸಹಕಾರಿ ಬ್ಯಾಂಕ್ ಮತ್ತು ಉಮಿಯಾ ಪರಿವಾರ್ ಒಪ್ಪಿಗೆ ನೀಡಿವೆ ಎಂದಿದ್ದಾರೆ.
ಪ್ರಾಥಮಿಕ ಚಿಕಿತ್ಸೆ, ಔಷಧಿಗಳು ಮತ್ತು ಊಟಗಳಂತಹ ವೆಚ್ಚಗಳನ್ನು ಗುಜರಾತ್ ಸರ್ಕಾರ ಭರಿಸಲಿದ್ದು, ಹಾಸಿಗೆಗಳು ಮತ್ತು ಇತರ ಖರ್ಚುಗಳನ್ನು ಸಂಬಂಧಪಟ್ಟ ಸಂಸ್ಥೆಗಳು ಭರಿಸುತ್ತವೆ. ಈ ಉಪಕ್ರಮವನ್ನು ರಾಜ್ಯದ ಇತರ ಭಾಗಗಳಲ್ಲಿಯೂ ಜಾರಿಗೆ ತರಲಾಗುವುದು ಎಂದು ಹೇಳಿದರು. ಹೋಮ್ ಐಸೋಲೇಷನ್ ರೋಗಿಗಳಿಗೆ ಟೋಲ್ ಫ್ರೀ ಸಂಖ್ಯೆ ಹೊಂದಿರುವ ವೈದ್ಯಕೀಯ ಸಲಹಾ ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು. ಎರಡು ದಿನಗಳಲ್ಲಿ ಪ್ರಾರಂಭವಾಗಲಿರುವ ಈ ಸೇವೆಗೆ ಸುಮಾರು 50 ನಿವೃತ್ತ ತಜ್ಞ ವೈದ್ಯರು ಲಭ್ಯವಾಗಲಿದ್ದಾರೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.