ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆ ಜೋರಾಗಿದ್ದು, ಸೋಂಕಿತರ ಚಿಕಿತ್ಸೆಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಚಿಕಿತ್ಸೆಗೆ ಪೂರವಾದ ಆಕ್ಸಿಜನ್, ವೆಂಟಿಲೇಟರ್, ಹಾಸಿಗೆ ಸೇರಿದಂತೆ ರೆಮ್ಡೆಸಿವಿರ್ ಔಷಧಗಳ ಕೊರತೆಯನ್ನೂ ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ರೆಮ್ಡೆಸಿವಿರ್ ಔಷಧದ ತಕ್ಷಣದ ಅಗತ್ಯತೆಯನ್ನು ಪರಿಗಣಿಸಿ ಅದರ ಮೇಲಿನ ಸೀಮಾ ಸುಂಕವನ್ನು ಕಂದಾಯ ಇಲಾಖೆ ಮನ್ನಾ ಮಾಡಿದೆ.
ಈ ಸಂಬಂಧ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಅವರು ಟ್ವೀಟ್ ಮಾಡಿದ್ದು, ಫಾರ್ಮಸುಟಿಕಲ್ಸ್ ಇಲಾಖೆಯ ಶಿಫಾರಸ್ಸಿನ ಮೇರೆಗೆ ತಕ್ಷಣದ ಅಗತ್ಯವನ್ನು ಪರಿಗಣಿಸಿ ಕಂದಾಯ ಇಲಾಖೆ ರೆಮ್ಡೆಸಿವಿರ್ ಮತ್ತು ಅದರ ಎಪಿಐ/ ಕೆಎಸ್ ಎಂ ಮೇಲಿನ ಸೀಮಾ ಸುಂಕವನ್ನು ಮನ್ನಾ ಮಾಡಿದೆ ಎಂದು ಹೇಳಿದ್ದಾರೆ. ಈ ಕ್ರಮ ದೇಶಿಯವಾಗಿ ರೆಮ್ ಡೆಸಿವಿರ್ ಇಂಜಕ್ಷನ್ ಲಭ್ಯತೆ ಮತ್ತಷ್ಟು ಹೆಚ್ಚಿಸಲಿದೆ ಎಂದು ಅವರು ಹೇಳಿದ್ದಾರೆ.
Considering the immediate requirement on the recommendation of the Department of Pharmaceuticals, the Department of Revenue has waived customs duty on #Remdesivir and its API/KSM. This step will further augment domestic availability of Remdesivir injection.
@PIB_India pic.twitter.com/Pk5t2OfCuY
— Sadananda Gowda (@DVSadanandGowda) April 21, 2021
ಕರ್ನಾಟಕವೂ ಸೇರಿದಂತೆ ದೇಶದ ಇತರ ರಾಜ್ಯಗಳಲ್ಲಿಯೂ ಕೊರೋನಾ ಆರ್ಭಟ ಜೋರಾಗಿದ್ದು, ಅನೇಕ ಮಂದಿ ಸೋಂಕಿಗೆ ತುತ್ತಾಗಿ ನರಳುವಂತಾಗಿದೆ. ಜೊತೆಗೆ ಸೋಂಕಿತರ ಚಿಕಿತ್ಸೆಗೆ ಅಗತ್ಯ ಔಷಧ, ಆಕ್ಸಿಜನ್, ವೆಂಟಿಲೇಟರ್, ಹಾಸಿಗೆಗಳನ್ನು ವ್ಯವಸ್ಥೆ ಮಾಡುವಲ್ಲಿಯೂ ಸರ್ಕಾರಗಳು, ಆಸ್ಪತ್ರೆಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.