ಬೆಂಗಳೂರು: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಮತ್ತು ಗೋವುಗಳ ಸಂರಕ್ಷಣಾ ವಿಧೇಯಕ ಅಧಿಸೂಚನೆ ಜಾರಿಗೊಳಿಸಿದ ಬಳಿಕ, ಕಳೆದ 60 ದಿನಗಳಲ್ಲಿ ಗೋಹತ್ಯೆ, ಅಕ್ರಮ ಸಾಗಾಟ ಪ್ರಕರಣಗಳಿಗೆ ಸಂಬಂಧಿಸಿದಂತೆ 58 ಎಫ್ಐಆರ್ಗಳನ್ನು ದಾಖಲು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 200 ಕ್ಕೂ ಅಧಿಕ ಗೋವುಗಳನ್ನು ಕಾಪಾಡಲಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಈ ಕಾಯ್ದೆಯಡಿ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುವುದು, ವಧೆ ಮಾಡುವುದಕ್ಕೆ ನಿಷೇಧವಿದ್ದು, ಅದರನ್ವಯ ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ತಿಳಿಸಿದೆ.
ಮಾಂಸಕ್ಕಾಗಿ ಗೋವುಗಳ ಸಾಗಾಟ, ವಧೆ ಮೊದಲಾದ ಕೃತ್ಯಗಳನ್ನು ತಪ್ಪಿಸುವ ನಿಟ್ಟಿನಲ್ಲಿ, ಇಂತಹ ಕೃತ್ಯಗಳನ್ನು ನಡೆಸುವವರನ್ನು ಬಂಧಿಸುವ ಅವಕಾಶವನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಪಶುವೈದ್ಯರು ಅಥವಾ ಸಂಬಂಧಪಟ್ಟ ಅಧಿಕಾರಿಗಳಿಂದ ಪ್ರಮಾಣಪತ್ರವನ್ನು ಪಡೆಯದೆಯೇ ಜಾನುವಾರುಗಳನ್ನು ರಾಜ್ಯದ ಹೊರಗೆ ಸಾಗಾಟ ಮಾಡುವವರ ಮೇಲೆ ದಾಳಿ ನಡೆಸಿ ಗೋವುಗಳನ್ನು ವಶಕ್ಕೆ ಪಡೆಯುವ ಅಧಿಕಾರವನ್ನೂ ಅಧಿಕಾರಿಗಳಿಗೆ ಈ ಕಾನೂನಿನ ಮೂಲಕ ನೀಡಲಾಗಿದೆ. ಶಿಕ್ಷೆಯ ಪ್ರಮಾಣವನ್ನು ಆಧರಿಸಿಕೊಂಡು 50 ಸಾವಿರದಿಂದ 7 ಲಕ್ಷದ ವರೆಗೆ ದಂಡ ಸಹಿತ ಜೈಲುಶಿಕ್ಷೆ ವಿಧಿಸುವಂತೆಯೂ ಈ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.