ನವದೆಹಲಿ: ಆರೋಗ್ಯ ಕಾರ್ಯಕರ್ತರಿಗೆ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿನ ವಿಮಾ ಯೋಜನೆಯನ್ನು ಕೇಂದ್ರ ಸರ್ಕಾರ ಒಂದು ವರ್ಷದ ಅವಧಿಗೆ ವಿಸ್ತರಿಸಿದೆ.
ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಪ್ರಾಣ ಕಳೆದುಕೊಂಡ ಕೊರೋನಾ ಯೋಧರ ಅವಲಂಬಿತರಿಗೆ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ಸುರಕ್ಷತಾ ವ್ಯಾಪ್ತಿಯನ್ನು ಒದಗಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ.
ಕೋವಿಡ್-19ನಿಂದ ಸಂಭವಿಸಬಹುದಾದ ಪ್ರತಿಕೂಲ ಪರಿಸ್ಥಿತಿ ಸಂದರ್ಭದಲ್ಲಿ ಕೊರೋನಾ ಯೋಧರ ಅವಲಂಬಿತರಿಗೆ ರೂ 50 ಲಕ್ಷ ವಿಮಾ ರಕ್ಷಣೆ ಒದಗಿಸಲಾಗುತ್ತದೆ. ಇದುವರೆಗೆ ವಿಮಾ ಕಂಪನಿಗಳು 287 ಕ್ಲೇಮ್ಗಳನ್ನು ಪಾವತಿಸಿವೆ. 2020ರ ಮಾರ್ಚ್ ನಲ್ಲಿ ಘೋಷಿಸಿದಂತೆ, ಇನ್ಸೂರೆನ್ಸ್ ಪಾಲಿಸಿ ಕ್ಲೇಮ್ 2021 ರ ಎಪ್ರಿಲ್ 24ರ ತನಕ ಮುಂದುವರೆಯಲಿದೆ, ಅದಾದ ಬಳಿಕ ಹೊಸ ಇನ್ಶುರೆನ್ಸ್ ಪಾಲಿಸಿ ಅನುಷ್ಠಾನಕ್ಕೆ ಬರಲಿದೆ ಎಂದು ಸರ್ಕಾರ ಹೇಳಿತ್ತು.
ಅದರಂತೆ ಇದೀಗ ವಿಮಾ ಯೋಜನೆಯನ್ನು ಮತ್ತೆ ಒಂದು ವರ್ಷಗಳ ಅವಧಿಗೆ ವಿಸ್ತರಣೆ ಮಾಡಲಾಗಿದೆ.
During the #CoronavirusPandemic, Pradhan Mantri Garib Kalyan Package(PMGKP) has provided a safety net to the dependents of #CoronaWarriors who lost their lives to #COVID19
I’m glad to announce that this scheme has now been extended for a period of one year with effect from today pic.twitter.com/KDa6h8lBWn
— Dr Harsh Vardhan (@drharshvardhan) April 20, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.