ಭಾರತದಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಚಟುವಟಿಕೆಗಳು ನಿರಂತರವಾಗಿ ಹೆಚ್ಚುತ್ತಿವೆ. ಕರೋನಾ ಸಾಂಕ್ರಾಮಿಕದಿಂದ ಉಂಟಾದ ಬಿಕ್ಕಟ್ಟಿನಲ್ಲೂ ಮಿಷನರಿಗಳು ಸಾಕಷ್ಟು ಲಾಭವನ್ನು ಪಡೆದಿದ್ದಾರೆ. ಈ ಅವಧಿಯಲ್ಲಿ ಭಾರತದಲ್ಲಿ ಮಿಷನರಿಗಳು 1 ಲಕ್ಷ ಜನರನ್ನು ಮತಾಂತರಗೊಳಿಸಿದ್ದಾರೆ ಮತ್ತು ಒಂದು ವರ್ಷದ ಅವಧಿಯಲ್ಲಿ 50,000 ಗ್ರಾಮಗಳನ್ನು ದತ್ತು ಪಡೆದುಕೊಂಡಿದ್ದಾರೆ.
ಬೈಬಲ್ ಅನ್ನು ಅನೇಕ ಭಾಷೆಗಳಿಗೆ ಭಾಷಾಂತರಿಸುವ ಉದ್ದೇಶದಿಂದ ಕೆಲಸ ಮಾಡುತ್ತಿರುವ ‘ಅನ್ಫೋಲ್ಡಿಂಗ್ ವರ್ಲ್ಡ್’ ನ ಸಿಇಒ ಡೇವಿಡ್ ರೀವ್ಸ್ ಅವರ ಹೇಳಿಕೆಯಿಂದ ಇದು ಬಹಿರಂಗವಾಗಿದೆ. ಕೊರೋನಾ ಅವಧಿಯಲ್ಲಿ ಚರ್ಚುಗಳು ಭಾರತದಲ್ಲಿ 50,000 ಗ್ರಾಮಗಳನ್ನು ದತ್ತು ಪಡೆದಿವೆ ಎಂದು ಅವರು ಹೇಳುತ್ತಾರೆ.
‘ಮಿಷನ್ ನ್ಯೂಸ್ ನೆಟ್ವರ್ಕ್ (ಎಂಎನ್ಎನ್) ಆನ್ಲೈನ್’ ಜೊತೆ ಮಾತನಾಡಿರುವ ಡೇವಿಡ್ ರೀವ್ಸ್, ಕಳೆದ 25 ವರ್ಷಗಳಂತೆ ಕೊರೋನಾ ಅವಧಿಯಲ್ಲೂ ಭಾರತದಲ್ಲಿ ಅನೇಕ ಚರ್ಚುಗಳನ್ನು ನಿರ್ಮಿಸಲಾಗಿದೆ. ಲಕ್ಷಾಂತರ ಜನರು ಈಗ ಯೇಸುಕ್ರಿಸ್ತನನ್ನು ನಂಬುತ್ತಿದ್ದಾರೆ ಮತ್ತು ಪ್ರಾರ್ಥನೆ ಮಾಡಲು ಚರ್ಚ್ಗೆ ಆಗಮಿಸುತ್ತಿದ್ದಾರೆ ಎಂದು ಅವರು ಹೇಳಿದರು. ತಮ್ಮ ಸಂಘಟನೆಯು ಭಾರತದ ವಿವಿಧ ಭಾಗಗಳಲ್ಲಿರುವ ಜನರಿಗೆ ಸ್ಥಳೀಯ ಭಾಷೆಗಳಿಗೆ ಬೈಬಲ್ ಭಾಷಾಂತರಿಸಲು ಸಾಧನಗಳನ್ನು ಒದಗಿಸುತ್ತಿದೆ” ಎಂದು ಅವರು ಹೇಳಿದ್ದಾರೆ.
ಪಾದ್ರಿಗಳನ್ನು ಬಲಪಡಿಸುವ ಉದ್ದೇಶದಿಂದ ‘ಅನ್ಫೋಲ್ಡಿಂಗ್ ವರ್ಲ್ಡ್’ ತೊಡಗಿಸಿಕೊಂಡಿದೆ ಎಂದು ಹೇಳಿರುವ ಅವರು, ಸಾಂಕ್ರಾಮಿಕ ರೋಗದಲ್ಲಿ ಭಾರತದ ಜನರು ಯಾರನ್ನೂ ಭೇಟಿಯಾಗಲು ಸಾಧ್ಯವಿಲ್ಲ, ಆದ್ದರಿಂದ ಅವರು ಪ್ರಾರ್ಥಿಸಲು ಪ್ರಾರಂಭಿಸಿದರು. ಈ ಪ್ರಾರ್ಥನೆಗಳು ಫೋನ್ ಮತ್ತು ವಾಟ್ಸಾಪ್ ಮೂಲಕ ದೇವರನ್ನು ತಲುಪಿದವು. ಸಾಂಕ್ರಾಮಿಕ ಸಮಯದಲ್ಲಿ 1 ಮಿಲಿಯನ್ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಲಾಯಿತು. ಪ್ರತಿ ಚರ್ಚ್ಗೆ 10 ಹಳ್ಳಿಗಳಲ್ಲಿ ಪ್ರಾರ್ಥನೆ ನಡೆಸುವಂತೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಹಣಕಾಸಿನ ಬಿಕ್ಕಟ್ಟು, ವೈದ್ಯಕೀಯ ನೆರವಿನ ಅಗತ್ಯ ಆರ್ಥಿಕ ದುರ್ಬಲ ವರ್ಗವನ್ನು ಮಿಷನರಿಗಳ ಬಲೆಗೆ ಬೀಳುವಂತೆ ಮಾಡಿದೆ ಎಂಬುದರಲ್ಲಿ ಸಂಶಯವಿಲ್ಲ. ಮಿಷನರಿಗಳು ಸಾವಿರಾರು ಹಳ್ಳಿಗಳಲ್ಲಿ ದಾಖಲೆ ಸಂಖ್ಯೆಯ ಚರ್ಚುಗಳನ್ನು ನಿರ್ಮಿಸಿದ್ದಾರೆ, ಅಲ್ಲಿ ಮೊದಲು ಯಾವುದೇ ಚರ್ಚ್ಗಳು ಇರಲಿಲ್ಲ. ಕ್ರಿಶ್ಚಿಯನ್ನರೇ ಇಲ್ಲದ ಗ್ರಾಮಗಳಲ್ಲೂ ಚರ್ಚ್, ಪ್ರಾರ್ಥನಾ ಮಂದಿರಗಳನ್ನು ಸ್ಥಾಪಿಸಿ ಅಲ್ಲಿನ ಜನರ ಮೂಲ ನಂಬಿಕೆಯನ್ನು ಕೆಡವಿ ಅವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಒಳಪಡುವಂತೆ ಮಾಡುವ ತಮ್ಮ ಅಜೆಂಡಾವನ್ನು ನಿಭಾಯಿಸುವಲ್ಲಿ ಮಿಷನರಿಗಳು ಒಂದರ್ಥದಲ್ಲಿ ಯಶಸ್ವಿಯೇ ಆಗುತ್ತಿದ್ದಾರೆ. ಜನರ ಸಂಕಷ್ಟಗಳನ್ನೇ ಇವರು ಕಾರ್ಯ ಸಾಧನೆಗಾಗು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಜನ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಭಾರತೀಯರ ಮೂಲ ನಂಬಿಕೆಗಳೇ ಮಾಯವಾಗುವ ಅಪಾಯ ಎದುರಾಗಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.