News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಈ ವರ್ಷ ಭಾರತಕ್ಕೆ ವಾಡಿಕೆಯ ಸಾಮಾನ್ಯ ಮಳೆ: ಹವಮಾನ ಇಲಾಖೆ

ನವದೆಹಲಿ: ಈ ಬಾರಿಯ ಮಳೆಗಾಲದಲ್ಲಿ ಭಾರತಕ್ಕೆ  ಸಾಮಾನ್ಯ ಮಳೆಯಾಗಲಿದೆ. ಜೂನ್ ನಿಂದ ಸೆಪ್ಟೆಂಬರ್ ವರೆಗೆ ವ್ಯಾಪಿಸಿರುವ ನೈರುತ್ಯ ಮಾನ್ಸೂನ್ ಅವಧಿಯಲ್ಲಿ ದೇಶಕ್ಕೆ ವಾಡಿಕೆಯ ಸಾಮಾನ್ಯ ಮಳೆಯಾಗಲಿದೆ ಎಂದು ವಿಜ್ಞಾನ, ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಸಚಿವ ಡಾ. ಹರ್ಷವರ್ಧನ್ ಇಂದು ಮಾಹಿತಿ ನೀಡಿದ್ದಾರೆ.

ಭಾರತ ಹವಾಮಾನ ಇಲಾಖೆ, ದೇಶದಲ್ಲಿ ನೈರುತ್ಯ ಮಾನ್ಸೂನ್ ಮಳೆಯು ದೀರ್ಘಾವಧಿಯ ಸರಾಸರಿಗೆ ಅನುಗುಣವಾಗಿ ಶೇಕಡಾ 96 ರಿಂದ 104% ರಷ್ಟು ಸಾಮಾನ್ಯವಾಗಿರುತ್ತದೆ ಎಂದು ಅಂದಾಜಿಸಿದೆ ಎಂದಿದ್ದಾರೆ.

ವಿವಿಧ ಜಾಗತಿಕ ಹವಾಮಾನ ಮಾದರಿಗಳ ಸಂಯೋಜನೆಯನ್ನು ಅನ್ವಯಿಸುವ ಸುಧಾರಿತ ಮತ್ತು ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಮಲ್ಟಿ-ಮಾಡೆಲ್ ಎನ್ಸೆಂಬಲ್ ಮುನ್ಸೂಚನಾ ವ್ಯವಸ್ಥೆಯನ್ನು ಈ ವರ್ಷ ಬಳಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಈ ವರ್ಷದ ಮೇ ಕೊನೆಯ ವಾರದಲ್ಲಿ ನವೀಕರಿಸಿದ ಮುನ್ಸೂಚನೆಗಳನ್ನು ಬಿಡುಗಡೆ ಮಾಡುವುದಾಗಿ ಇಲಾಖೆ ತಿಳಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top