News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ʼಲಸಿಕೆ ಉತ್ಸವ’ದಡಿ ಅರ್ಹರಿಗೆ 1.28 ಕೋಟಿ ಲಸಿಕೆ ಡೋಸ್ ನೀಡಲಾಗಿದೆ

ನವದೆಹಲಿ: ಕೋವಿಡ್-19 ವೈರಸ್ ವಿರುದ್ಧ ನಾಲ್ಕು ದಿನಗಳ ಕಾಲ ನಡೆಸಲಾದ ವಿಶೇಷ ಅಭಿಯಾನ ʼಲಸಿಕೆ ಉತ್ಸವ’ ದಲ್ಲಿ ಅರ್ಹ ಫಲಾನುಭವಿಗಳಿಗೆ 1 ಕೋಟಿ 28 ಲಕ್ಷ ಲಸಿಕೆ ಡೋಸ್‌ ಅನ್ನು  ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಎಪ್ರಿಲ್ 11 ರಿಂದ ಎಪ್ರಿಲ್‌ 14ರವರೆಗೆ ಲಸಿಕೆ ಉತ್ಸವವನ್ನು ನಡೆಸಲಾಗಿತ್ತು.‌

ಲಸಿಕೆ ಉತ್ಸವದ ಅಂಗವಾಗಿ ಖಾಸಗಿ ಮತ್ತು ಸಾರ್ವಜನಿಕ ಕೆಲಸದ ಸ್ಥಳಗಳಲ್ಲಿ ಅನೇಕ  ವ್ಯಾಕ್ಸಿನೇಷನ್ ಕೇಂದ್ರಗಳನ್ನು (ಸಿವಿಸಿ) ಕಾರ್ಯನಿರ್ವಹಿಸಲಾಗಿತ್ತು. ನಾಲ್ಕು ದಿನಗಳ ಅವಧಿಯಲ್ಲಿ, ಕ್ರಿಯಾತ್ಮಕ ಕೋವಿಡ್‌ ವ್ಯಾಕ್ಸಿನೇಷನ್ ಕೇಂದ್ರಗಳ ಸಂಖ್ಯೆಯನ್ನು ರಾಷ್ಟ್ರವು ಗಮನಾರ್ಹವಾಗಿ ಹೆಚ್ಚಿಸಿದೆ. ಸಂಪನ್ಮೂಲಗಳ ಸಂಪೂರ್ಣ ಬಳಕೆಯನ್ನು ಮಾಡಲಾಗಿದೆ, ಅಸ್ತಿತ್ವದಲ್ಲಿರುವ 45 ಸಾವಿರ ಕೇಂದ್ರಗಳ ಜೊತೆಗೆ ಸರಾಸರಿ ಸುಮಾರು 20 ಸಾವಿರ ಹೆಚ್ಚುವರಿ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಕ್ರಿಯಾತ್ಮಕಗೊಳಿಸಲಾಯಿತು.

 ವಿಶೇಷ ವ್ಯಾಕ್ಸಿನೇಷನ್ ಡ್ರೈವ್‌ನ ಮೊದಲ ದಿನದಂದು 27 ಲಕ್ಷಕ್ಕೂ ಹೆಚ್ಚಿನ ಲಸಿಕೆ ಡೋಸ್‌ ಅನ್ನು ನೀಡಲಾಯಿತು.

ಎಪ್ರಿಲ್‌ 14ರಂದು ಕೊನೆಯ ದಿನ 33 ಲಕ್ಷ ಡೋಸ್ ಲಸಿಕೆಗಳನ್ನು ನೀಡಲಾಗಿದ್ದು, ದೇಶದ ಮೂರು ರಾಜ್ಯಗಳಾದ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳು ಈವರೆಗೆ ಅರ್ಹ ಫಲಾನುಭವಿಗಳಿಗೆ 1 ಕೋಟಿಗಿಂತ ಹೆಚ್ಚಿನ ಡೋಸ್‌ ಅನ್ನು ನೀಡಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top