ನವದೆಹಲಿ: ವಿಶೇಷ ಎನ್ಐಎ ನ್ಯಾಯಾಲಯವು ಅನ್ಸಾರುಲ್ಲಾ ಬಾಂಗ್ಲಾ ಟೀಮ್ (ಎಬಿಟಿ) ಸಂಘಟನೆಯ ಭಯೋತ್ಪಾದಕ ರಿಜುಯಲ್ ಇಸ್ಲಾಂ ಅಲಿಯಾಸ್ ರಿಯಾಜ್ ಅಲಿಯಾಸ್ ಸುಮೊನ್ಗೆ ಭಾರತದಲ್ಲಿ ಭಯೋತ್ಪಾದಕ ಕೃತ್ಯ ಎಸಗಲು ಯೋಜನೆ ರೂಪಿಸಿದ 2017 ರ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ.
ಎನ್ಐಎ ವಕ್ತಾರರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, ಬಾಂಗ್ಲಾದೇಶದ ಖುಲ್ನಾ ನಿವಾಸಿ ರಿಜುಯಲ್ ಇಸ್ಲಾಂಗೆ ಭಾರತೀಯ ದಂಡ ಸಂಹಿತೆ, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಮತ್ತು ವಿದೇಶಿಯರ ಕಾಯ್ದೆಯ ಹಲವಾರು ಸೆಕ್ಷನ್ಗಳ ಅಡಿಯಲ್ಲಿ ಶಿಕ್ಷೆಗೊಳಪಡಿಸಲಾಗಿದೆ ಎಂದು ಹೇಳಿದ್ದಾರೆ.
36,000 ರೂಪಾಯಿಗಳ ದಂಡವನ್ನೂ ಆತನಿಗೆ ವಿಧಿಸಲಾಗಿದೆ. ಕೋಲ್ಕತಾ ಎಸ್ಟಿಎಫ್ 2017 ರ ನವೆಂಬರ್ 21 ರಂದು ಬಾಂಗ್ಲಾದೇಶದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಎಬಿಟಿಯ ಐವರು ಸದಸ್ಯರನ್ನು ನಗರದಲ್ಲಿ ಬಂಧಿಸಿತ್ತು. ಬಂಧಿತ ಸದಸ್ಯರಲ್ಲಿ ನಾಲ್ವರು ಬಾಂಗ್ಲಾದೇಶದ ಪ್ರಜೆಗಳು ಮತ್ತು ಒಬ್ಬ ಭಾರತೀಯ ಪ್ರಜೆ.
ಎನ್ಐಎ 2018 ರ ಮಾರ್ಚ್ 1 ರಂದು ತನಿಖೆಯನ್ನು ವಹಿಸಿಕೊಂಡಿದ್ದು, ತನಿಖೆ ಪೂರ್ಣಗೊಂಡ ನಂತರ ಐವರು ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದೆ. ತನಿಖೆಯ ವೇಳೆ, ನಾಲ್ಕು ಬಾಂಗ್ಲಾದೇಶದ ಎಬಿಟಿ ಸದಸ್ಯರು 2016 ರಲ್ಲಿ ಭಾರತಕ್ಕೆ ಪ್ರವೇಶಿಸಿ ಭಾರತದಲ್ಲಿ ಭಯೋತ್ಪಾದಕ ಕೃತ್ಯ ಎಸಗಲು ಸಂಚು ರೂಪಿಸಿದ್ದು ಪತ್ತೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.