ನವದೆಹಲಿ: ಯುಎಇಯ ಮೊದಲ ಸಾಂಪ್ರದಾಯಿಕ ಹಿಂದೂ ದೇವಾಲಯದ ಅಡಿಪಾಯದ ಕೆಲಸ ಮುಂದಿನ ತಿಂಗಳು ಅಬುಧಾಬಿಯಲ್ಲಿ ಪೂರ್ಣಗೊಳ್ಳಲಿದೆ.
ಈ ದೇವಾಲಯದಲ್ಲಿ ಹಿಂದೂ ದೇವರುಗಳಿಗೆ ಮೀಸಲಾಗಿರುವ ಹಲವಾರು ಗುಡಿಗಳು ಇರಲಿವೆ. ಸಂಕೀರ್ಣದಲ್ಲಿ ಸಂದರ್ಶಕರ ಕೇಂದ್ರ, ಪ್ರಾರ್ಥನಾ ಮಂದಿರಗಳು, ಗ್ರಂಥಾಲಯ, ತರಗತಿ ಕೊಠಡಿ, ಸಮುದಾಯ ಕೇಂದ್ರ, ಆಂಫಿಥಿಯೇಟರ್, ಆಟದ ಪ್ರದೇಶಗಳು, ಉದ್ಯಾನಗಳು, ಪುಸ್ತಕಗಳು ಮತ್ತು ಉಡುಗೊರೆ ಅಂಗಡಿಗಳು, ಆಹಾರ ಅಂಗಡಿ ಮತ್ತು ಇತರ ಸೌಲಭ್ಯಗಳು ಇರಲಿವೆ.
ಅಡಿಪಾಯದ ಕೆಲಸವು ಅಂತಿಮ ಹಂತದಲ್ಲಿದೆ ಮತ್ತು ನೆಲಮಟ್ಟದಿಂದ 4.5 ಮೀಟರ್ ಎತ್ತರಕ್ಕೆ ಏರುತ್ತಿದೆ ಮತ್ತು ಗುಲಾಬಿ ಮರಳುಗಲ್ಲುಗಳು ಮತ್ತು ಮಾರ್ಬಲ್ಗಳ ಸ್ಥಾಪನೆಯು ಮೇ ತಿಂಗಳಿನಿಂದ ಪ್ರಾರಂಭವಾಗಲಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.
“ನಾನು ಈ ಯೋಜನೆಯ ಗುಣಮಟ್ಟ ಮತ್ತು ಪ್ರಗತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇನೆ. ಈ ಯೋಜನೆಯ ಭಾಗವಾಗಲು ನಾನು ತುಂಬಾ ಆಶೀರ್ವದಿಸಲ್ಪಟ್ಟಿದ್ದೇನೆ. ಇದು ಜಿವನದಲ್ಲಿ ಸಿಗುವ ಒಂದು ಬಾರಿಯ ಅವಕಾಶ ”ಎಂದು ಪ್ರಾಜೆಕ್ಟ್ ಎಂಜಿನಿಯರ್ ಅಶೋಕ್ ಕೊಂಡೆಟಿ ಹೇಳಿದ್ದಾರೆ.
“ಈ ಅಡಿಪಾಯದಲ್ಲಿ ಎರಡು ಸುರಂಗಗಳಿವೆ. ಸುರಂಗಗಳಿಗಾಗಿ, ಭಾರತದಿಂದ ಕಲ್ಲುಗಳನ್ನು ಸ್ವೀಕರಿಸಲಾಗಿದೆ ಮತ್ತು ಮುಂದಿನ ವಾರದಲ್ಲಿ ನಾವು ಅವುಗಳನ್ನು ಅಳವಡಿಸಲು ಪ್ರಾರಂಭಿಸುತ್ತೇವೆ. ನಾವು ಒಟ್ಟು ಅಡಿಪಾಯದ ಕೆಲಸವನ್ನು ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳಿಸಲಿದ್ದೇವೆ. ಇದರಿಂದ, ನಾವು ಮೇ ತಿಂಗಳಲ್ಲಿ ಸ್ಟೋನ್ ವರ್ಕ್ ಕೆಲಸ ಪ್ರಾರಂಭಿಸಬಹುದಾಗಿದೆ” ಎಂದು ಅವರು ಹೇಳಿದ್ದಾರೆ.
ಸ್ಟೋನ್ ವರ್ಕ್ ಕಾರ್ಯದ ಬಹುಪಾಲು ಭಾಗವನ್ನು ಭಾರತದ ರಾಜ್ಯಗಳಾದ ರಾಜಸ್ಥಾನ ಮತ್ತು ಗುಜರಾತ್ನಲ್ಲಿ 2,000 ಕ್ಕೂ ಹೆಚ್ಚು ಶಿಲ್ಪಿಗಳು ಮಾಡಿದ್ದಾರೆ. ಪೂರ್ಣಗೊಂಡ ಸ್ಟೋನ್ ವರ್ಕ್ಗಳನ್ನು ಅಬುಧಾಬಿಗೆ ಕಳುಹಿಸಲಿದ್ದೇವೆ, ನಂತರ ಅದನ್ನು ಅಡಿಪಾಯದ ಮೇಲೆ ಇಡಲಾಗುತ್ತದೆ ಎಂದಿದ್ದಾರೆ.
ಅಬುಧಾಬಿಯ ಮೊದಲ ಹಿಂದೂ ದೇವಾಲಯದ ಕಲ್ಲುಗಳು ಹಿಂದೂ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಚಿತ್ರಣಗಳು, ಭಾರತದ ಗ್ರಂಥಗಳು ಮತ್ತು ಪ್ರಾಚೀನ ಕಥೆಗಳು ಮತ್ತು ಕೊಲ್ಲಿ ರಾಷ್ಟ್ರಗಳ ಜನಪ್ರಿಯ ಶೈಲಿಗಳಿಂದ ಅಲಂಕರಿಸಲ್ಪಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.