ನವದೆಹಲಿ: ಭಾರತೀಯ ಸೇನೆಯು ಬಾಂಗ್ಲಾದೇಶದಲ್ಲಿ ನಡೆಯುವ ಬಹುರಾಷ್ಟ್ರೀಯ ಮಿಲಿಟರಿ ಅಭ್ಯಾಸ ʼಶಾಂತಿರ್ ಒಗ್ರೊಶೆನಾ -2021ʼನಲ್ಲಿ ಭಾಗವಹಿಸಲಿದೆ.
ಬಾಂಗ್ಲಾದೇಶ ರಾಷ್ಟ್ರದ ಪಿತಾಮಹ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ಜನ್ಮ ಶತಮಾನೋತ್ಸವ ಮತ್ತು 50 ವರ್ಷಗಳ ವಿಮೋಚನೆಯ ಸ್ಮರಣಾರ್ಥ 9 ದಿನಗಳ ಅಭ್ಯಾಸ ಈ ತಿಂಗಳ 4 ರಂದು ಪ್ರಾರಂಭವಾಗಲಿದೆ.
ಡೋಗ್ರಾ ರೆಜಿಮೆಂಟ್ನ 30 ಸಿಬ್ಬಂದಿಗಳನ್ನು ಒಳಗೊಂಡ ಭಾರತೀಯ ಸೇನಾ ತುಕಡಿ ಭೂತಾನ್, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೈನ್ಯದ ತುಕಡಿಗಳೊಂದಿಗೆ ಈ ಅಭ್ಯಾಸದಲ್ಲಿ ಭಾಗವಹಿಸಲಿದೆ. ʼರೋಬಸ್ಟ್ ಪೀಸ್ ಕೀಪಿಂಗ್ ಆಪರೇಶನ್ʼ ಎಂಬುದು ಅಭ್ಯಾಸದ ಥೀಮ್ ಆಗಿದೆ.
ಯುಎಸ್ಎ, ಯುಕೆ, ಟರ್ಕಿ, ಸೌದಿ ಅರೇಬಿಯಾ, ಕುವೈಟ್ ಮತ್ತು ಸಿಂಗಾಪುರದ ಮಿಲಿಟರಿ ವೀಕ್ಷಕರು ಅಭ್ಯಾಸದಲ್ಲಿ ಹಾಜರಾಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.