ನವದೆಹಲಿ: ತೀವ್ರ ಹಿಮಪಾತದ ಹಿನ್ನೆಲೆಯಲ್ಲಿ ಉತ್ತರ ಸಿಕ್ಕಿಂನ ಭಾರತ-ಚೀನಾ ಗಡಿಯ ಬಳಿ ಸಿಲುಕಿಕೊಂಡಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 450 ಪ್ರವಾಸಿಗರನ್ನು ಭಾರತೀಯ ಸೇನೆಯು ರಕ್ಷಿಸಿದೆ ಎಂದು ಸೇನಾ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಯೊಂಗ್ಡಿಯ ಎತ್ತರ ಪ್ರದೇಶಗಳಲ್ಲಿ ಸಬ್ ಝೀರೊ ತಾಪಮಾನದ ನಡುವೆ ಸಿಲುಕಿಕೊಂಡಿದ್ದ 120 ವಾಹನಗಳಲ್ಲಿದ್ದ ಪ್ರವಾಸಿಗರನ್ನು ರಕ್ಷಿಸಲಾಗಿದೆ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಪಿ ಖೊಂಗ್ಸೈ ಅವರು ತಿಳಿಸಿದ್ದಾರೆ.
ಪ್ರವಾಸಿಗರನ್ನು ರಕ್ಷಿಸಲಾಗಿದೆ ಮತ್ತು ಹಿಮವನ್ನು ತೆರವುಗೊಳಿಸಿ ಸುರಕ್ಷಿತ ಮಾರ್ಗವನ್ನು ರಚಿಸುವ ಮೂಲಕ ವಾಹನಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಗಾಯಗಳಿಲ್ಲದಿದ್ದರೂ ರಕ್ಷಿಸಲ್ಪಟ್ಟ ಜನರಿಗೆ ವೈದ್ಯಕೀಯ ನೆರವು ನೀಡಲಾಗಿದೆ.
120 ವಾಹನಗಳಲ್ಲಿ ಉತ್ತರ ಸಿಕ್ಕಿಂಗೆ ಪ್ರಯಾಣಿಸುತ್ತಿದ್ದ ಪ್ರವಾಸಿಗರು ಹಠಾತ್ ಮತ್ತು ತೀವ್ರ ಹಿಮಪಾತದ ನಡುವೆ ಸಿಲುಕಿಕೊಂಡರು, ರಸ್ತೆಯ ಮೇಲೆ ಮಂಜು ಅಧಿಕವಾಗಿ ಸಂಗ್ರಹವಾಗಿದ್ದರಿಂದ ಪ್ರಯಾಣವು ಅಸುರಕ್ಷಿತವಾಗಿತ್ತು.
“ಪ್ರತಿಕೂಲ ಹವಾಮಾನ ಮತ್ತು ಪ್ರತಿಕೂಲ ಸ್ಥಿತಿಯ ನಡುವೆಯೂ ಭಾರತೀಯ ಸೇನೆಯ ವೀರ ಯೋಧರು ಭಾರೀ ಹಿಮಪಾತದ ನಂತರ ಭಾರತ-ಚೀನಾ ಗಡಿಯ ಸಮೀಪ ಸಿಕ್ಕಿಂನ ಯೋಂಗ್ಡಿಯಲ್ಲಿ ಸಮಯೋಚಿತ ಮತ್ತು ತ್ವರಿತ ಕಾರ್ಯಾಚರಣೆ ನಡೆಸಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 450 ಕ್ಕೂ ಹೆಚ್ಚು ಪ್ರವಾಸಿಗರನ್ನು ರಕ್ಷಿಸಿದ್ದಾರೆ” ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.