ನವದೆಹಲಿ: 2021 ರ ಮಾರ್ಚ್ ತಿಂಗಳಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್ಟಿ ಆದಾಯವು ರೂ 1,23,902 ಕೋಟಿಯಾಗಿದ್ದು, ಅದರಲ್ಲಿ ಸಿಜಿಎಸ್ಟಿ ರೂ 22,973 ಕೋಟಿ, ಎಸ್ಜಿಎಸ್ಟಿ ರೂ 29,329 ಕೋಟಿ, ಐಜಿಎಸ್ಟಿ ರೂ 62,842 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ ರೂ 31,097 ಕೋಟಿ ಸೇರಿದಂತೆ) ) ಮತ್ತು ಸೆಸ್ ರೂ 8,757 ಕೋಟಿ (ಸರಕುಗಳ ಆಮದಿನಲ್ಲಿ ಸಂಗ್ರಹಿಸಿದ ರೂ 935 ಕೋಟಿ ಸೇರಿದಂತೆ) ಆಗಿದೆ.
ಮಾರ್ಚ್ 2021 ರ ಅವಧಿಯಲ್ಲಿ ಜಿಎಸ್ಟಿ ಆದಾಯವು ಜಿಎಸ್ಟಿ ಪರಿಚಯಿಸಿದ ನಂತರದ ಅತಿ ಹೆಚ್ಚು ಆದಾಯವಾಗಿದೆ. ಕಳೆದ ಐದು ತಿಂಗಳುಗಳಲ್ಲಿ ಜಿಎಸ್ಟಿ ಆದಾಯದಲ್ಲಿ ಚೇತರಿಕೆಯ ಪ್ರವೃತ್ತಿ ಕಾಣುತ್ತಿದೆ. ಇದಕ್ಕೆ ಅನುಗುಣವಾಗಿ, ಮಾರ್ಚ್ 2021 ರ ಆದಾಯವು ಕಳೆದ ವರ್ಷದ ಇದೇ ತಿಂಗಳ ಜಿಎಸ್ಟಿ ಆದಾಯಕ್ಕಿಂತ 27% ಹೆಚ್ಚಾಗಿದೆ.
ಈ ತಿಂಗಳಲ್ಲಿ, ಸರಕುಗಳ ಆಮದಿನಿಂದ ಬರುವ ಆದಾಯವು 70% ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು ಕಳೆದ ವರ್ಷ ಇದೇ ತಿಂಗಳಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ 17% ಹೆಚ್ಚಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಜಿಎಸ್ಟಿ ಆದಾಯವು ಈ ಹಣಕಾಸು ವರ್ಷದ ಮೊದಲ, ಎರಡನೇ, ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕಗಳಲ್ಲಿ ಕ್ರಮವಾಗಿ (-) 41%, (-) 8%, 8% ಮತ್ತು 14% ನಷ್ಟು ಬೆಳವಣಿಗೆಯ ದರವನ್ನು ಕಂಡಿದೆ, ಇದು ಜಿಎಸ್ಟಿ ಆದಾಯ ಮತ್ತು ಒಟ್ಟಾರೆ ಆರ್ಥಿಕತೆಯ ಚೇತರಿಕೆಯ ಪ್ರವೃತ್ತಿಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.