ನವದೆಹಲಿ: ಮೂರು ಪರಮಾಣು-ಚಾಲಿತ ದಾಳಿ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುವ ಮೆಗಾ ದೇಶಿ ಯೋಜನೆಗೆ ಅನುಮೋದನೆ ನೀಡಲು ಭಾರತ ಸಜ್ಜಾಗಿದೆ. ಇದರ ನಂತರದ ಹಂತದಲ್ಲಿ ಇನ್ನೂ ಮೂರು ಯೋಜನೆಗೆ ಅನುಮೋದನೆ ನೀಡಲಾಗುವ ನಿರೀಕ್ಷೆ ಇದೆ.
ಹಿಂದೂ ಮಹಾಸಾಗರ ಪ್ರದೇಶ (ಐಒಆರ್) ಮತ್ತು ಅದಕ್ಕೂ ಮೀರಿ ಚೀನಾದ ವಿಸ್ತರಿಸುತ್ತಿರುವ ನೌಕಾ ಹೆಜ್ಜೆಗುರುತನ್ನು ಎದುರಿಸುವ ದೀರ್ಘಾವಧಿಯ ಯೋಜನೆಯ ಭಾಗವಾಗಿ ಈ ಯೋಜನೆಯನ್ನು ಅನುಮೋದಿಸಲಾಗುತ್ತಿದೆ
ಕಳೆದ ಒಂದು ವರ್ಷದಿಂದ ವಿಳಂಬಗೊಳ್ಳುತ್ತಿರುವ ಜಲಾಂತರ್ಗಾಮಿ ಯೋಜನೆಗೆ ಭದ್ರತೆ ಕುರಿತ ಕ್ಯಾಬಿನೆಟ್ ಸಮಿತಿ (ಸಿಸಿಎಸ್) ಅಂತಿಮ ಅನುಮೋದನೆ ನೀಡುವ ಸಾಧ್ಯತೆ ಇದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಒಟ್ಟಾರೆ ಯೋಜನೆಯಡಿ ವೈಜಾಗ್ನ ಹಡಗು ನಿರ್ಮಾಣ ಕೇಂದ್ರದಲ್ಲಿ (ಎಸ್ಬಿಸಿ) ಆರು ಪರಮಾಣು-ಚಾಲಿತ ದಾಳಿ ಜಲಾಂತರ್ಗಾಮಿ ನೌಕೆಗಳನ್ನು (ನೌಕಾ ಭಾಷೆಯಲ್ಲಿ ಎಸ್ಎಸ್ಎನ್ಗಳು ಎಂದು ಕರೆಯಲಾಗುತ್ತದೆ) ನಿರ್ಮಿಸಲಾಗುತ್ತದೆ.
ಆದರೆ ಮೊದಲ ಬಾರಿಗೆ ಕೇವಲ ಮೂರು ಮಾತ್ರ ಸಿಸಿಎಸ್ನಿಂದ ಅನುಮೋದಿಸಲ್ಪಡುತ್ತದೆ, ಮೊದಲ ಸ್ಥಳೀಯ ಎಸ್ಎಸ್ಎನ್ ಸುಮಾರು 2032ರ ವೇಳೆಗೆ ಸಿದ್ಧವಾಗಲಿದೆ. ಪ್ರತಿಯೊಂದಕ್ಕೂ ಸುಮಾರು 15,000 ಕೋಟಿ ರೂ ವೆಚ್ಚವಾಗಲಿದೆ. ಆದರೂ ಇದಕ್ಕೆ ಹಣಕಾಸು ಹೊಂದಿಸುವುದು ದೊಡ್ಡ ಸಮಸ್ಯೆಯಾಗುವುದಿಲ್ಲ ಏಕೆಂದರೆ ಇದು ಹಲವಾರು ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.