ನವದೆಹಲಿ: ಪೂರ್ವ ಲಡಾಖ್ನಲ್ಲಿ ಭಾರತ ಮತ್ತು ಚೀನಾ ಸಂಪೂರ್ಣ ಸೇನಾ ವಾಪಾಸ್ಸಾತಿ ಬಗ್ಗೆ ಮಾತುಕತೆ ಮುಂದುವರೆಸುತ್ತಿವೆ, ಉಭಯ ದೇಶಗಳು ಇನ್ನೂ ತಮ್ಮ ವಾಯುಪಡೆಗಳನ್ನು ಮುಖ್ಯ ಘರ್ಷಣಾ ಸ್ಥಳಗಳಿಂದ ಹಿಂತೆಗೆದುಕೊಂಡಿಲ್ಲ ಎಂಬುದು ಈಗ ಬೆಳಕಿಗೆ ಬಂದಿದೆ.
ವರದಿಯ ಪ್ರಕಾರ, ಲಡಾಖ್ ವಲಯದಲ್ಲಿ ಭಾರತೀಯ ವಾಯುಪಡೆಯ ನಿಯೋಜನೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಚೀನಾದ ವಾಯುಪಡೆಯ (ಪಿಎಲ್ಎಎಎಫ್) ನಿಯೋಜನೆಯಲ್ಲಿ ಕೂಡ ಯಾವುದೇ ಬದಲಾವಣೆಗಳು ನಡೆದಿಲ್ಲ.
ಕಳೆದ ವರ್ಷ ಮೇ ತಿಂಗಳಲ್ಲಿ ಪ್ರಾರಂಭವಾದ ಗಡಿ ಘರ್ಷಣೆಯನ್ನು ಪರಿಹರಿಸಲು ಉಭಯ ದೇಶಗಳು ಈವರೆಗೆ ಸುಮಾರು 10 ಸುತ್ತಿನ ಉನ್ನತ ಮಟ್ಟದ ಮಿಲಿಟರಿ ಮಾತುಕತೆಗಳನ್ನು ನಡೆಸಿವೆ. ಫೆಬ್ರವರಿ 20 ರಂದು ಉಭಯ ರಾಷ್ಟ್ರಗಳು 10 ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಾತುಕತೆಗಳನ್ನು ಪಾಂಗೊಂಗ್ ತ್ಸೊದ ಎರಡೂ ತೀರಗಳಲ್ಲಿನ ಕಾರ್ಯತಾಂತ್ರಿಕ ಎತ್ತರದಲ್ಲಿ ನಿಯೋಜನೆ ವಾಪಾಸ್ಸಾತಿ ಪೂರ್ಣಗೊಳಿಸಿದ ನಂತರ ನಡೆಸಿದವು.
ಉಭಯ ದೇಶಗಳ ನಡುವಿನ ಒಪ್ಪಂದದ ಪ್ರಕಾರ, ಉಭಯ ದೇಶಗಳು ತಮ್ಮ ಮುಂಚೂಣಿ ಪಡೆಗಳು, ಟ್ಯಾಂಕ್ಗಳು, ಯುದ್ಧ ವಾಹನಗಳು ಮತ್ತು ಫಿರಂಗಿ ಬಂದೂಕುಗಳನ್ನು ಮುಖ್ಯ ಘರ್ಷಣೆ ಸ್ಥಳಗಳಿಂದ ಹಿಂತೆಗೆದುಕೊಂಡವು.
11 ನೇ ಸುತ್ತಿನ ಮಿಲಿಟರಿ ಮಾತುಕತೆಗೆ ಯಾವುದೇ ಅಧಿಕೃತ ದಿನಾಂಕಗಳನ್ನು ಘೋಷಿಸಲಾಗಿಲ್ಲವಾದರೂ, ಇತರ ವಿವಾದಿತ ಪ್ರದೇಶಗಳಾದ ಡೆಪ್ಸಾಂಗ್, ಹಾಟ್ ಸ್ಪ್ರಿಂಗ್ಸ್ ಮತ್ತು ಗೊಗ್ರಾಗಳತ್ತ ಗಮನ ಹರಿಸುವ ಸಾಧ್ಯತೆಯಿದೆ.
ಮಾತುಕತೆ ಮುಂದುವರೆದರೂ ವಾಯುಪಡೆಗಳ ನಿಯೋಜನೆಯಲ್ಲಿ ಬದಲಾವಣೆ ಆಗುವುದು ಅಸಂಭವವಾಗಿದೆ ಎಂದು ಸೆಂಟರ್ ಫಾರ್ ಏರ್ ಪವರ್ ಸ್ಟಡೀಸ್ನ ಮಹಾನಿರ್ದೇಶಕ ಏರ್ ಮಾರ್ಷಲ್ ಅನಿಲ್ ಚೋಪ್ರಾ (ನಿವೃತ್ತ) ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.