ನವದೆಹಲಿ: ದೇಶದಲ್ಲಿರುವ ಎನ್ಜಿಒಗಳು ವಿದೇಶದಿಂದ ಪಡೆಯುತ್ತಿರುವ ಹಣ ಎಷ್ಟು ಎನ್ನುವ ಕುತೂಹಲ ನಮ್ಮಲ್ಲಿರುವುದು ಸಹಜ. ಈ ಬಗ್ಗೆ ಕೇಂದ್ರ ಸರ್ಕಾರವು ವರದಿ ಬಿಡುಗಡೆ ಮಾಡಿದೆ.
ದೇಶದಲ್ಲಿರುವ ಎನ್ಜಿಒಗಳಿಗೆ 2016 – 17 ರಿಂದ 2019-20 ರ ಅವಧಿಯಲ್ಲಿ ರೂ. 50,000 ಕೋಟಿಗೂ ಅಧಿಕ ವಿದೇಶಿ ದೇಣಿಗೆ ಹರಿದು ಬಂದಿದೆ. ಅದರಲ್ಲೂ ಕರ್ನಾಟಕ, ದೆಹಲಿ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಕೇರಳದಲ್ಲಿರುವ ಎನ್ಜಿಒಗಳಿಗೆ ಹೆಚ್ಚು ದೇಣಿಗೆ ಹರಿದು ಬಂದಿದೆ ಎಂದು ಕೇಂದ್ರ ಸರಕಾರ ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ.
ದೇಶದಲ್ಲಿರುವ ಒಟ್ಟು ಎನ್ಜಿಒಗಳಿಗೆ ಜಗತ್ತಿನ 130 ದೇಶಗಳ ದೇಣಿಗೆ ನೀಡಿದೆ. ಈ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದಲ್ಲಿದ್ದುಕೊಂಡು ರೂ. 19,942.22 ಕೋಟಿ ದೇಣಿಗೆಯನ್ನು ನೀಡಿದೆ. ಇದು ಈ ಅವಧಿಯಲ್ಲಿ ಹರಿದು ಬಂದ ಒಟ್ಟು ದೇಣಿಗೆ ಶೇ. 39 11 ರಷ್ಟಾಗಿದೆ.
ದೇಶದಲ್ಲಿ ಅತೀ ಹೆಚ್ಚು ದೇಣಿಗೆ ಪಡೆದಿದ್ದು ದೆಹಲಿಯಲ್ಲಿರುವ ಎನ್ಜಿಒಗಳು ಒಟ್ಟು ಗರಿಷ್ಠ ದೇಣಿಗೆ 12,861.64 ಕೋಟಿ ಹರಿದು ಬಂದಿದೆ. ನಂತರದ ಸ್ಥಾನದಲ್ಲಿ ತಮಿಳುನಾಡು ಮಹಾರಾಷ್ಟ್ರ ಹಾಗೂ ಕರ್ನಾಟಕದ ಎನ್ಜಿಒಗಳಿವೆ.
ದೇಶದಲ್ಲಿ ಅನೇಕ ಎನ್ಜಿಒಗಳು ಸೇವೆಯ ಹೆಸರಿನಲ್ಲಿ ಹಣ ಮಾಡುವ ಉದ್ದೇಶವನ್ನು ಹೊಂದಿರುವ ಕಾರಣದಿಂದ ಕೇಂದ್ರ ಸರ್ಕಾರವು ಈ ಬಗ್ಗೆ ಪಾರದರ್ಶಕವಾದ ವ್ಯವಸ್ಥೆಯೊಂದನ್ನು ಪರಿಚಯಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.