ನವದೆಹಲಿ: ಅಮೆರಿಕ ಅಧ್ಯಕ್ಷ ಅಧ್ಯಕ್ಷ ಜೋ ಬೈಡನ್ ಅವರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 40 ವಿಶ್ವ ನಾಯಕರನ್ನು ವರ್ಚುವಲ್ ಹವಾಮಾನ ಶೃಂಗಸಭೆಗೆ ಆಹ್ವಾನಿಸಿದ್ದಾರೆ ಎಂದು ಶ್ವೇತಭವನವು ಶುಕ್ರವಾರ ಮಾಹಿತಿ ನೀಡಿದೆ.
ಹವಾಮಾನ ಕುರಿತ ನಾಯಕರ ಶೃಂಗಸಭೆಯನ್ನು ಏಪ್ರಿಲ್ 22 ಮತ್ತು 23 ರಂದು ಜೋ ಬೈಡೆನ್ ಆಯೋಜಿಸಲಿದ್ದಾರೆ.
“ಇಂದು, ಅಧ್ಯಕ್ಷ ಬೈಡೆನ್ ಅವರು ಏಪ್ರಿಲ್ 22 ಮತ್ತು 23 ರಂದು ಆಯೋಜಿಸಲಿರುವ ಹವಾಮಾನ ಕುರಿತ ನಾಯಕರ ಶೃಂಗಸಭೆಗೆ 40 ವಿಶ್ವ ನಾಯಕರನ್ನು ಆಹ್ವಾನಿಸಿದ್ದಾರೆ. ವರ್ಚುವಲ್ ಲೀಡರ್ಸ್ ಸಮಿಟ್ ಅನ್ನು ಸಾರ್ವಜನಿಕರ ವೀಕ್ಷಣೆಗಾಗಿ ನೇರ ಪ್ರಸಾರ ಮಾಡಲಾಗುವುದು” ಎಂದು ಶ್ವೇತಭವನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಪ್ಯಾರಿಸ್ ಒಪ್ಪಂದಕ್ಕೆ ಯುನೈಟೆಡ್ ಸ್ಟೇಟ್ಸ್ ಅನ್ನು ಮರಳಿಸಲು ಅಧ್ಯಕ್ಷ ಬೈಡೆನ್ ತನ್ನ ಅಧಿಕಾರದ ದಿನವೇ ಪ್ರಯತ್ನ ಆರಂಭಿಸಿದರು. ಕೆಲ ದಿನಗಳ ನಂತರ, ಜನವರಿ 27 ರಂದು ಹವಾಮಾನ ಬಿಕ್ಕಟ್ಟು ಎದುರ ಸಲು ಪ್ರಮುಖ ಆರ್ಥಿಕತೆಗಳ ಪ್ರಯತ್ನಗಳನ್ನು ಹೆಚ್ಚಿಸಲು ಶೀಘ್ರದಲ್ಲೇ ನಾಯಕರ ಶೃಂಗಸಭೆಯನ್ನು ಕರೆಯುವುದಾಗಿ ಘೋಷಿಸಿದರು” ಎಂದು ಹೇಳಿಕೆ ತಿಳಿಸಿದೆ.
ಈ ವರ್ಚುವಲ್ ಶೃಂಗಸಭೆಗೆ ಬೈಡನ್ ಅವರು, ಪ್ರಧಾನಿ ಮೋದಿ ಜೊತೆಗೆ QUAD ನಾಯಕರಾದ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನಿನ ಪ್ರಧಾನಿ ಯೋಶಿಹೈಡ್ ಸುಗಾ ಅವರನ್ನು ಆಹ್ವಾನಿಸಿದ್ದಾರೆ. ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ಗೂ ಆಹ್ವಾನವನ್ನು ಕಳುಹಿಸಲಾಗಿದೆ.
ತಮ್ಮ ದೇಶಗಳು ಬಲವಾದ ಹವಾಮಾನ ಮಹತ್ವಾಕಾಂಕ್ಷೆಗೆ ಹೇಗೆ ಕೊಡುಗೆ ನೀಡುತ್ತವೆ ಎಂಬುದನ್ನು ರೂಪಿಸಲು ಶೃಂಗಸಭೆಯನ್ನು ಒಂದು ಅವಕಾಶವಾಗಿ ಬಳಸಬೇಕೆಂದು ಬೈಡನ್ ನಾಯಕರನ್ನು ಒತ್ತಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.