ನವದೆಹಲಿ: ಭಾರತವು ತಲಾ 100 ಟನ್ ತೂಕದ ಎರಡು ಮೊಬೈಲ್ ಹಾರ್ಬರ್ ಕ್ರೇನ್ಗಳನ್ನು ಇರಾನ್ಗೆ ಪೂರೈಸಿದೆ.
ಈ ಬಗ್ಗೆ ಇರಾನಿನಲ್ಲಿನ ಭಾರತೀಯ ರಾಯಭಾರಿ ಕಛೇರಿಯು ಮಾಹಿತಿಯನ್ನು ನೀಡಿದ್ದು, ತಲಾ 100 ಟನ್ ತೂಕದ ಎರಡು ಮೊಬೈಲ್ ಹಾರ್ಬರ್ ಕ್ರೇನ್ಗಳನ್ನು (ಎಂಎಚ್ಸಿ) ಭಾರತ ಪೂರೈಸಿದೆ ಎಂದಿದೆ,
ಟ್ವೀಟ್ನಲ್ಲಿ ಇರಾನ್ನ ಭಾರತೀಯ ರಾಯಭಾರ ಕಚೇರಿಯು, “ಚಬಹಾರ್ನ ಶಾಹಿದ್ ಬೆಹೆಶ್ತಿ ಬಂದರಿನ ಹಂತ -1 ರ ಅಭಿವೃದ್ಧಿಗೆ ಭಾರತದ ನಿರಂತರ ಬದ್ಧತೆಯ ಭಾಗವಾಗಿ ಕ್ರೇನ್ ಪೂರೈಸಲಾಗಿದೆ” ಎಂದು ಹೇಳಿದೆ.
ಚಬಹಾರ್ನಲ್ಲಿನ ಆಯಕಟ್ಟಿನ ಬಂದರಿಗೆ ರವಾನಿಸಲಾದ ಸಲಕರಣೆಗಳ ಎರಡನೇ ಸಾಗಣೆ ಇದಾಗಿದೆ. ಭಾರತ ಈ ವರ್ಷದ ಜನವರಿಯಲ್ಲಿ 140 ಟನ್ಗಳಷ್ಟು ತೂಕದ ಎರಡು ಎಂಎಚ್ಸಿಗಳನ್ನು ಪೂರೈಸಿತ್ತು. ಇದೀಗ ಮತ್ತೆ ಎರಡು ಕ್ರೇನ್ಗಳನ್ನು ಪೂರೈಸಿದೆ.
ಕೇಂದ್ರ ಶಿಪ್ಪಿಂಗ್ ಸಚಿವ ಮನ್ಸುಖ್ ಮಾಂಡವಿಯಾ ಮಾತನಾಡಿ, ಚಬಹಾರ್ ಬಂದರನ್ನು ಅಭಿವೃದ್ಧಿಪಡಿಸುವ ಭಾರತದ ಬದ್ಧತೆಯೊಂದಿಗೆ ಈ ಕಾರ್ಯ ಮುಂದುವರೆದಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.