ಪಣಜಿ: ಆಡಳಿತರೂಢ ಬಿಜೆಪಿ ಗೋವಾದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಪಣಜಿ ಕಾರ್ಪೊರೇಶನ್ನಲ್ಲಿ ಪಕ್ಷವು 30 ವಾರ್ಡ್ಗಳಲ್ಲಿ 25 ಅನ್ನು ಗೆದ್ದಿದೆ. ಬಿಜೆಪಿ ಇತರ ಮಂಡಳಿಗಳಲ್ಲಿ ಅನೇಕ ವಾರ್ಡ್ಗಳನ್ನು ಗೆದ್ದಿದೆ.
ಆರು ಪುರಸಭೆಗಳಿಗೆ, ಕಾರ್ಪೊರೇಷನ್ ಆಫ್ ಸಿಟಿ ಆಫ್ ಪಣಜಿಯ 30 ವಾರ್ಡ್ಗಳಿಗೆ, ಜಿಲ್ಲಾ ಪಂಚಾಯತ್ ಮತ್ತು 22 ಪಂಚಾಯಿತಿಗಳಿಗೆ ಶನಿವಾರ ಚುನಾವಣೆ ನಡೆದವು. ಕಳೆದ ಶನಿವಾರ ಮತದಾನಕ್ಕೆ ಒಳಪಟ್ಟ ಆರು ಪಾಲಿಕೆಗಳೆಂದರೆ ಕೆನಕೋನಾ, ಕರ್ಚೋರೆಮ್-ಕ್ಯಾಕೋರಾ, ಬಿಚೋಲಿಮ್, ಕುಂಕೋಲಿಮ್, ವಾಲ್ಪೊಯಿ ಮತ್ತು ಪೆರ್ನೆಮ್.
ಬಿಜೆಪಿಗೆ ನಿರಂತರ ಬೆಂಬಲ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಗೋವಾ ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಟ್ವೀಟ್ ನಲ್ಲಿ ಮೋದಿ ಅವರು, “ರಾಜ್ಯದ ಮುನ್ಸಿಪಲ್ ಚುನಾವಣೆ 2021 ರ ಫಲಿತಾಂಶಗಳು ಪಕ್ಷದ ಅಭಿವೃದ್ಧಿ ಕಾರ್ಯಸೂಚಿಯ ಬಗ್ಗೆ ಜನರ ಮೆಚ್ಚುಗೆಯನ್ನು ತೋರಿಸುತ್ತದೆ” ಎಂದಿದ್ದಾರೆ. ಪ್ರಚಾರದ ಸಮಯದಲ್ಲಿ ಜನರ ನಡುವೆ ಹೋಗಿ ಶ್ರಮಿಸಿದ ಎಲ್ಲ ಶ್ರಮಶೀಲ ಬಿಜೆಪಿ ಕಾರ್ಯಕರ್ತರನ್ನು ಅವರು ಶ್ಲಾಘಿಸಿದರು.
Thank you Goa for the continuous support to BJP. The results of the Municipal Elections 2021 show the people’s appreciation towards our Party’s development agenda. I laud all hardworking BJP Karyakartas who went among people and worked hard during the campaign.
— Narendra Modi (@narendramodi) March 22, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.