ನವದೆಹಲಿ: ಭಾರತ-ಚೀನಾ ಗಡಿ ರಸ್ತೆಗಳ 1530 ಕಿ.ಮೀ ಉದ್ದದ ನಿರ್ಮಾಣವನ್ನು ಸರ್ಕಾರ ಪೂರ್ಣಗೊಳಿಸಿದೆ ಎಂದು ರಾಜ್ಯಸಭೆಯಲ್ಲಿ ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದರು.
ರಾಷ್ಟ್ರದ ಭದ್ರತೆಯ ಹಿತ ದೃಷ್ಟಿಯಿಂದ ಭಾರತ – ಚೀನಾ ಗಡಿ ಪ್ರದೇಶದಲ್ಲಿ ಮಹತ್ವವೆನಿಸಿದ ಒಟ್ಟು 3323 ಕಿ.ಮೀ
ಉದ್ದದ ರಸ್ತೆಯಲ್ಲಿ 1530 ಕಿ.ಮೀ ಪೂರ್ಣಗೊಂಡಿದೆ. ಇದರಲ್ಲಿ 19 ಗಡಿ ರಸ್ತೆಗಳು ನಿರ್ಮಾಣ ಹಂತದಲ್ಲಿದೆ ಮತ್ತು 2023 ರೊಳಗೆ ಪೂರ್ಣಗೊಳ್ಳಲಿದೆ.
ಭಾರತ-ಚೀನಾ ಗಡಿ ರಸ್ತೆಗಳ 1530 ಕಿ.ಮೀ ಉದ್ದದ ನಿರ್ಮಾಣವನ್ನು ಸರ್ಕಾರ ಈವರೆಗೆ ಪೂರ್ಣಗೊಳಿಸಿದೆ. ಇದು ಇಂಡೋ-ಚೀನಾ ಗಡಿಯುದ್ದಕ್ಕೂ ಆಯಕಟ್ಟಿನ ಮಹತ್ವದ್ದಾಗಿ ಗುರುತಿಸಲ್ಪಟ್ಟ ಒಟ್ಟು ಮೂರು ಸಾವಿರ 323 ಕಿಲೋಮೀಟರ್ ಉದ್ದದ ರಸ್ತೆಗಳಲ್ಲಿ ಒಂದಾಗಿದೆ.
ಈ ಮಾಹಿತಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಅರುಣಾಚಲ ಪ್ರದೇಶ, ಲಡಾಖ್, ಹಿಮಾಚಲ ಪ್ರದೇಶದ ಇಂಡೋ-ಚೀನಾ ಗಡಿ ರಸ್ತೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ಈ ಸಂದರ್ಭದಲ್ಲಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.