ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಚೆನಾಬ್ ನದಿಯ ಮೇಲೆ ನಿರ್ಮಾಣ ಮಾಡಲಾಗುತ್ತಿರುವ ವಿಶ್ವದ ಅತಿ ಎತ್ತರದ ಸೇತುವೆಯ ಕಮಾನು ತಳಭಾಗ ಪೂರ್ಣಗೊಂಡಿದೆ. ಇದಕ್ಕಾಗಿ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಭಾನುವಾರ ‘ಐತಿಹಾಸಿಕ ಕ್ಷಣ’ ವನ್ನು ಶ್ಲಾಘಿಸಿದರು.
1.3 ಕಿ.ಮೀ ಉದ್ದದ ಸೇತುವೆ ಚೆನಾಬ್ ನದಿಯಿಂದ 359 ಮೀಟರ್ ಎತ್ತರದಲ್ಲಿದೆ. ವಿಶೇಷವಾಗಿ, ಸೇತುವೆಯ ಕಮಾನು ಪ್ಯಾರಿಸ್ನ ಪ್ರಸಿದ್ಧ ಐಫೆಲ್ ಟವರ್ಗಿಂತ 35 ಮೀಟರ್ ಎತ್ತರವಾಗಿದೆ.
ಈ ತಿಂಗಳ ಆರಂಭದಲ್ಲಿ, ಗೋಯಲ್ ಟ್ವಿಟರ್ನಲ್ಲಿ ಚಿತ್ರವನ್ನು ಹಂಚಿಕೊಂಡಿದ್ದರು ಮತ್ತು “ಎಂಜಿನಿಯರಿಂಗ್ ಅದ್ಭುತ” ಸೇತುವೆ ಪೂರ್ಣಗೊಳ್ಳುವ ಹಾದಿಯಲ್ಲಿದೆ ಎಂದು ಹೇಳಿದರು. ಇದನ್ನು “ಇನ್ಫ್ರಾಸ್ಟ್ರಕ್ಚರಲ್ ಮಾರ್ವೆಲ್ ಇನ್ ಮೇಕಿಂಗ್” ಎಂದು ಕರೆದ ಕೇಂದ್ರ ಸಚಿವರು ಇದನ್ನು ಒಂದು ವಿಶಿಷ್ಟವಾದ ಮೂಲಸೌಕರ್ಯ ಎಂದು ಬಣ್ಣಿಸಿದರು. ಇಡೀ ರಚನೆಯನ್ನು ಉಕ್ಕಿನಿಂದ ನಿರ್ಮಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಉದಂಪುರ್-ಶ್ರೀನಗರ-ಬಾರಾಮುಲ್ಲಾ ರೈಲು ಯೋಜನೆಯ ಭಾಗವಾಗಿ ರಿಯಾಸಿ ಜಿಲ್ಲೆಯ ಚೆನಾಬ್ ನದಿಯಲ್ಲಿ ನಿರ್ಮಿಸಲಾದ ಚೆನಾಬ್ ಸೇತುವೆ, ಕೇಂದ್ರಾಡಳಿತ ಪ್ರದೇಶವನ್ನು ಭಾರತದ ಉಳಿದ ಭಾಗಗಳೊಂದಿಗೆ ರೈಲು ಮಾರ್ಗದ ಮೂಲಕ ಸಂಪರ್ಕಿಸುತ್ತದೆ. ಈ ರೈಲ್ವೆ ಸೇತುವೆಯ ನಿರ್ಮಾಣ ಕಾರ್ಯವನ್ನು 2017 ರ ನವೆಂಬರ್ನಲ್ಲಿ ಪ್ರಾರಂಭಿಸಲಾಯಿತು. ಚೆನಾಬ್ ಸೇತುವೆ ನಿರ್ಮಾಣಕ್ಕೆ ಒಟ್ಟು 1,250 ಕೋಟಿ ರೂ.ವೆಚ್ಚವಾಗಿದೆ. ಈ ಸೇತುವೆ ಫ್ರಾನ್ಸ್ನ ಪ್ರಸಿದ್ಧ ಐಫೆಲ್ ಟವರ್ಗಿಂತ 35 ಮೀಟರ್ ಎತ್ತರದಲ್ಲಿದೆ. ಈ ರೈಲ್ವೆ ಸೇತುವೆ ಭೂಕಂಪನ ಮತ್ತು ಹೆಚ್ಚಿನ ತೀವ್ರತೆಯ ಸ್ಫೋಟಗಳನ್ನು ಸಹಿಸಿಕೊಳ್ಳಬಲ್ಲದು.
In a historic moment, the arch bottom of the Chenab bridge 🌉 has been completed today. Next, the arch upper of the engineering marvel in making will be completed.
It is all set to be the world's highest Railway bridge. pic.twitter.com/dqwN5N2HTE
— Piyush Goyal (@PiyushGoyal) March 14, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.