ನವದೆಹಲಿ: ಮಾರ್ಚ್ 12 ರಂದು ನಡೆದ ಮೊದಲ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಸ್, ಜಪಾನ್ ಮತ್ತು ಆಸ್ಟ್ರೇಲಿಯಾದ ನಾಯಕರು ಭಾಗವಹಿಸಿದ್ದರು. ಶೃಂಗಸಭೆಯ ನಂತರ, ಪಿಎಂ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್, ಯುಕೆ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ ಅವರೊಂದಿಗೆ ಫಲಪ್ರದ ಮಾತುಕತೆ ನಡೆಸಿದರು.
ಲಸಿಕೆಗಳು, ಹವಾಮಾನ ಬದಲಾವಣೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಕುರಿತ ಚರ್ಚೆಗಳು ಕ್ವಾಡ್ ಅನ್ನು ಜಾಗತಿಕ ಒಳಿತಿಗಾಗಿ ಮತ್ತು ಇಂಡೋ-ಪೆಸಿಫಿಕ್ನಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ “ಸಕಾರಾತ್ಮಕ ಶಕ್ತಿಯಾಗಿ” ಮಾಡುತ್ತದೆ ಎಂದು ಟ್ವಿಟರ್ನಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
ಕೊರೋನಾವೈರಸ್ ವಿರುದ್ಧದ ಹೋರಾಟದಲ್ಲಿ ಕ್ವಾಡ್ ನಾಯಕರು ಒಗ್ಗೂಡಿದ್ದಾರೆ ಎಂದು ಸರಣಿ ಟ್ವೀಟ್ಗಳಲ್ಲಿ ಪಿಎಂ ಮೋದಿ ಹೇಳಿದ್ದಾರೆ. ಸುರಕ್ಷಿತ ಲಸಿಕೆಗಳ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ನಾಯಕರು ಕ್ವಾಡ್ ಸಹಭಾಗಿತ್ವವನ್ನು ಪ್ರಾರಂಭಿಸಿದರು ಎಂದು ಅವರು ಹೇಳಿದ್ದಾರೆ.
ಇಂಡೋ-ಪೆಸಿಫಿಕ್ ಪ್ರದೇಶದ ದೇಶಗಳಿಗೆ ಸಹಾಯ ಮಾಡಲು ಜಪಾನ್, ಯುಎಸ್ಎ ಮತ್ತು ಆಸ್ಟ್ರೇಲಿಯಾದ ಬೆಂಬಲದೊಂದಿಗೆ ಭಾರತದ ಅಸಾಧಾರಣ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲಾಗುವುದು ಎಂದು ಪಿಎಂ ಮೋದಿ ಹೇಳಿದ್ದಾರೆ.
Had fruitful discussions with @POTUS @JoeBiden, PM @ScottMorrisonMP and PM @sugawitter at the 1st Quad Summit.
Reiterated India’s commitment to a free, open and inclusive Indo-Pacific in line with our vision of SAGAR – Security and Growth for All in the Region.
— Narendra Modi (@narendramodi) March 12, 2021
United in our fight against COVID-19, we launched a landmark Quad partnership to ensure accessibility of safe COVID-19 vaccines. India’s formidable vaccine production capacity will be expanded with support from Japan, US & Australia to assist countries in the Indo-Pacific region.
— Narendra Modi (@narendramodi) March 12, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.