ನವದೆಹಲಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ತನ್ನ 52 ನೇ ರೈಸಿಂಗ್ ದಿನವನ್ನು ಇಂದು ಆಚರಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಡೆಗೆ ಶುಭ ಹಾರೈಸಿದ್ದಾರೆ ಮತ್ತು ಭಾರತದ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಅದರ ಸಿಬ್ಬಂದಿ ವಹಿಸುತ್ತಿರುವ ಪಾತ್ರವನ್ನು ಶ್ಲಾಘಿಸಿದ್ದಾರೆ.
“ರೈಸಿಂಗ್ ದಿನದಂದು, ಧೈರ್ಯಶಾಲಿ ಸಿಐಎಸ್ಎಫ್ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಶುಭಾಶಯಗಳು. ರಾಷ್ಟ್ರೀಯ ಸುರಕ್ಷತೆ ಮತ್ತು ಪ್ರಗತಿಯನ್ನು ಹೆಚ್ಚಿಸುವಲ್ಲಿ ಅವರ ಪಾತ್ರವು ಬಹಳ ಮೌಲ್ಯಯುತವಾಗಿದೆ. 2019 ರಲ್ಲಿ ನಾನು ಸಿಐಎಸ್ಎಫ್ ನ ರೈಸಿಂಗ್ ಡೇ ಆಚರಣೆಯಲ್ಲಿ ಭಾಗವಹಿಸಿದ್ದೆ. ಅಂದು ನಾನು ಮಾತನಾಡಿದ್ದು ಇಲ್ಲಿದೆ” ಎಂದು ಪಿಎಂ ಮೋದಿ ಟ್ವೀಟ್ ನಲ್ಲಿ ತನ್ನ ಭಾಷಣದ ತುಣಕನ್ನು ಹಂಚಿಕೊಂಡಿದ್ದಾರೆ.
ಭಾರತದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಒಂದಾದ ಸಿಐಎಸ್ಎಫ್ ಪ್ರಮುಖ ಸರ್ಕಾರಿ ಮತ್ತು ಕೈಗಾರಿಕಾ ಕಟ್ಟಡಗಳ ಸುರಕ್ಷತೆಯ ಜವಾಬ್ದಾರಿಯನ್ನು ಹೊಂದಿದೆ.
ಸಿಐಎಸ್ಎಫ್ ರೈಸಿಂಗ್ ಡೇ ಅನ್ನು ಪ್ರತಿ ವರ್ಷ ಮಾರ್ಚ್ 10 ರಂದು ಭಾರತದಾದ್ಯಂತ ಆಚರಿಸಲಾಗುತ್ತದೆ. ಇದು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಇತಿಹಾಸವನ್ನು ಆಚರಿಸುವ ಮಹತ್ವದ ದಿನವಾಗಿದೆ. ಸಿಐಎಸ್ಎಫ್ ಅನ್ನು ಕೇಂದ್ರ ಗೃಹ ಸಚಿವಾಲಯ ನಿಯಂತ್ರಿಸುತ್ತದೆ. ರಕ್ಷಣೆ ಮತ್ತು ಭದ್ರತೆ ಸಿಐಎಸ್ಎಫ್ನ ಧ್ಯೇಯವಾಕ್ಯವಾಗಿದೆ.
On their Raising Day, greetings to the courageous @CISFHQrs personnel and their families. Their role in furthering national safety and progress is deeply valued. In 2019, I had attended the Raising Day celebrations of CISF. Here is what I had spoken then. https://t.co/655hqumYN1
— Narendra Modi (@narendramodi) March 10, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.