ನವದೆಹಲಿ: ಲಸಿಕೆ ಮೈತ್ರಿ ಉಪಕ್ರಮದಡಿ ಭಾರತದ ಒಟ್ಟು ಲಸಿಕೆ ಪೂರೈಕೆ 461.66 ಲಕ್ಷ ಡೋಸ್ ಅನ್ನು ತಲುಪಿದೆ. ನಿನ್ನೆ ಸಂಜೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ, ಒಟ್ಟು ಡೋಸ್ಗಳ ಪೈಕಿ 71.5 ಲಕ್ಷ ಡೋಸೇಜ್ ಅನುದಾನದ ಮೂಲಕ ಮತ್ತು 288.4 ಲಕ್ಷ ಡೋಸೇಜ್ಗಳನ್ನು ವಾಣಿಜ್ಯ ದೃಷ್ಟಿಯಿಂದ ವಿತರಿಸಲಾಗಿದೆ ಎಂದಿದ್ದಾರೆ.
ಒಟ್ಟಾರೆಯಾಗಿ, ಭಾರತವು 47 ದೇಶಗಳಿಗೆ ಮತ್ತು ಯುಎನ್ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಗಳನ್ನು ವಿತರಿಸಿದೆ. ಭಾರತದ ವಿತರಣೆ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಮಾನವಕುಲದ ಹಿತಕ್ಕಾಗಿ ಬಳಸಿಕೊಳ್ಳಲಾಗುವುದು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯಂತೆ ಲಸಿಕೆ ಮೈತ್ರಿ ಉಪಕ್ರಮಕ್ಕೆ ಮಾರ್ಗದರ್ಶನ ನೀಡಲಾಗಿದೆ ಎಂದು ಶ್ರೀವಾಸ್ತವ್ ಹೇಳಿದ್ದಾರೆ.
ಅಲ್ಲದೇ, ವಿದೇಶಗಳಿಂದ ಭಾರತೀಯರನ್ನು ಕರೆ ತರುವ ವಂದೇ ಭಾರತ್ ಮಿಷನ್ನ 10 ನೇ ಹಂತವು ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಈ ಹಂತದಲ್ಲಿ, 28 ದೇಶಗಳಿಂದ 1350 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ವಿಮಾನಗಳನ್ನು ನಿರ್ವಹಿಸಲು ನಿರ್ಧರಿಸಲಾಗಿದೆ. ಇದರಿಂದ ಅಂದಾಜು 2 ಲಕ್ಷ 60 ಸಾವಿರ ಜನರಿಗೆ ಅನುಕೂಲವಾಗಲಿದೆ. ಈ ಪೈಕಿ ಸುಮಾರು 920 ವಿಮಾನಗಳು GCC ದೇಶಗಳಿಂದ, ಯುಎಸ್ ಮತ್ತು ಕೆನಡಾದಿಂದ ಸುಮಾರು 150, ಯುಕೆ ಮತ್ತು ಯುರೋಪಿನಿಂದ 120, ಆಗ್ನೇಯ ಏಷ್ಯಾದಿಂದ 100 ಮತ್ತು ಭಾರತದ ನೆರೆಹೊರೆಯ 50 ವಿಮಾನಗಳು ಸೇರಿವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.