ನವದೆಹಲಿ: ಇಂದು ವಿಶ್ವ ವನ್ಯಜೀವಿ ದಿನ. ಜಗತ್ತಿನ ಅರಣ್ಯ ಸಂಪತ್ತು, ಪ್ರಾಣಿ ಪ್ರಬೇಧಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.
ನಮ್ಮ ಪ್ರಕೃತಿಯಲ್ಲಿ ಮುಂದಿನ ಭವಿಷ್ಯದಲ್ಲಿ ಆಗಲಿರುವ ಅಸಮತೋಲನವನ್ನು ತಡೆಗಟ್ಟಲು ಮತ್ತು ವನ್ಯಜೀವಿಗಳು ಮತ್ತು ಅರಣ್ಯ ಸಂಪತ್ತಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ, 2013 ರ ಮಾರ್ಚ್ 3 ರಂದು ವಿಶ್ವದಾದ್ಯಂತ ವಿಶ್ವ ವನ್ಯಜೀವಿಗಳ ದಿನವನ್ನು ಆಚರಿಸಲು ವಿಶ್ವಸಂಸ್ಥೆಯ ಸಮಾವೇಶದಲ್ಲಿ ಘೋಷಿಸಲಾಯಿತು. ನಶಿಸಿ ಹೋಗುತ್ತಿರುವ ಅರಣ್ಯ ಸಂಪತ್ತು ಮತ್ತು ಪ್ರಾಣಿ ಸಂಕುಲಗಳ ಸಂರಕ್ಷಿಸುವ ಕರ್ತವ್ಯವನ್ನು ಮನುಷ್ಯನಿಗೆ ನೆನಪು ಮಾಡಿಕೊಡುವ ದಿನ ಇದಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟ್ ಮಾಡಿ, “ವನ್ಯಜೀವಿ ಸಂರಕ್ಷಣೆಗಾಗಿ ಕೆಲಸ ಮಾಡುವ ಎಲ್ಲರಿಗೂ ನಾನು ವಂದಿಸುತ್ತೇನೆ. ಸಿಂಹಗಳು, ಹುಲಿಗಳು ಮತ್ತು ಚಿರತೆಗಳೇ ಆಗಿರಲಿ, ಭಾರತವು ವಿವಿಧ ಪ್ರಾಣಿಗಳ ಜನಸಂಖ್ಯೆಯಲ್ಲಿ ಸ್ಥಿರವಾದ ಏರಿಕೆಯನ್ನು ಕಾಣುತ್ತಿದೆ. ನಮ್ಮ ಕಾಡುಗಳ ರಕ್ಷಣೆ ಮತ್ತು ಪ್ರಾಣಿಗಳಿಗೆ ಸುರಕ್ಷಿತ ಆವಾಸಸ್ಥಾನಗಳನ್ನು ಖಚಿತಪಡಿಸಿಕೊಳ್ಳಲು ನಾವು ಸಾಧ್ಯವಿರುವ ಎಲ್ಲವನ್ನೂ ಮಾಡಬೇಕು” ಎಂದಿದ್ದಾರೆ.
ವನ್ಯಜೀವಿಗಳು ಅಪಾಯದಲ್ಲಿವೆ. ಆದ್ದರಿಂದ ನಾವು ಈ ದಿನ ಪ್ರಾಣಿ, ಪಕ್ಷಿಗಳು ಮತ್ತು ಸಸ್ಯಗಳ ನಾಶದ ಬಗ್ಗೆ ತಿಳಿದುಕೊಂಡು ಅವುಗಳ ಸಂರಕ್ಷಣೆಗೆ ಮುಂದಾಗಬೇಕು. ಆಗ ಮಾತ್ರ ವಿಶ್ವ ವನ್ಯಜೀವಿ ದಿನದ ಆಚರಣೆಗೆ ಒಂದು ಮಹತ್ವ ಸಿಗಲಿದೆ.
On #WorldWildlifeDay, I salute all those working towards wildlife protection. Be it lions, tigers and leopards, India is seeing a steady rise in the population of various animals. We should do everything possible to ensure protection of our forests and safe habitats for animals.
— Narendra Modi (@narendramodi) March 3, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.