ನವದೆಹಲಿ: ಕಡ್ಡಾಯವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್ಟ್ಯಾಗ್ಗಳನ್ನು ಬಳಸುವುದರಿಂದ ಇಂಧನದ ಮೇಲೆ ವಾರ್ಷಿಕವಾಗಿ 20,000 ಕೋಟಿ ರೂಪಾಯಿ ಉಳಿತಾಯವಾಗಲಿದೆ ಮತ್ತು ದೇಶದ ಆದಾಯವನ್ನು ಸುಮಾರು ರೂ 10,000 ಕೋಟಿಗಳಷ್ಟು ಹೆಚ್ಚಿಸುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸೋಮವಾರ ಹೇಳಿದ್ದಾರೆ.
ಟ್ರಾಫಿಕ್ ಕ್ಯೂ ಉದ್ದ ಮತ್ತು ಕಾಯುವ ಸಮಯವನ್ನು ಅಳೆಯಲು ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಿಗಾಗಿ ಲೈವ್ ಮಾನಿಟರಿಂಗ್ ಸಿಸ್ಟಮ್ ಅನ್ನು ಪ್ರಾರಂಭಿಸಿದ ಸಂದರ್ಭದಲ್ಲಿ ಗಡ್ಕರಿ ಈ ಮಾತನ್ನಾಡಿದ್ದಾರೆ. ಅಡೆತಡೆಗಳನ್ನು ಕಡಿಮೆ ಮಾಡಲು ಮತ್ತು ಕಡ್ಡಾಯವಾದ ಫಾಸ್ಟ್ಯಾಗ್ ಬಳಕೆಯ ದಕ್ಷತೆಯನ್ನು ಸುಧಾರಿಸಲು ತಕ್ಷಣದ ನಿರ್ವಹಣಾ ಪ್ರತಿಕ್ರಿಯೆಯನ್ನು ಈ ಲೈವ್ ಮಾನಿಟರಿಂಗ್ ಸಿಸ್ಟಮ್ ನೀಡಲಿದೆ.
ಲೈವ್ ಮಾನಿಟರಿಂಗ್ ಸಿಸ್ಟಮ್ ಪ್ರತಿ ಪ್ಲಾಜಾಗೆ ‘ದೈನಂದಿನ ದಟ್ಟಣೆ ಸೂಚ್ಯಂಕ’ ಮತ್ತು ರಾಷ್ಟ್ರೀಯ ಹೆದ್ದಾರಿ ಜಾಲದಾದ್ಯಂತದ ವಾಹನ ದಟ್ಟಣೆಯನ್ನು ಅಳೆಯುತ್ತದೆ. ಟೋಲ್ ಪ್ಲಾಜಾಗಳಲ್ಲಿ ಹೆಚ್ಚಿನ ಗರಿಷ್ಠ ಗಂಟೆಗಳ ಸಂಚಾರದ ನೈಜ-ಸಮಯದ ವಿವರಗಳನ್ನು ಇದು ಒದಗಿಸುತ್ತದೆ.
“ಒಟ್ಟು 80% ರಷ್ಟು ಟೋಲ್ ಪ್ಲಾಜಾಗಳಲ್ಲಿ ಶೂನ್ಯ ಕಾಯುವ ಸಮಯವಿದೆ. ಫಾಸ್ಟ್ಟ್ಯಾಗ್ ಕಡ್ಡಾಯಗೊಳಿಸಿದ ನಂತರ ಕಳೆದ ಹದಿನೈದು ದಿನಗಳಲ್ಲಿ ಎಲೆಕ್ಟ್ರಾನಿಕ್ ಟೋಲಿಂಗ್ ಮೂಲಕ ಟೋಲ್ ಸಂಗ್ರಹವು 80% ರಿಂದ 93% ತಲುಪಿದೆ” ಎಂದು ಗಡ್ಕರಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.