ಬೆಂಗಳೂರು: ನಗರದ ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಸಿದ್ಧಪಡಿಸಿರುವ ಆರ್-ಸ್ಯಾಟ್ ಮೈಕ್ರೋ ಉಪಗ್ರಹವನ್ನು ಫೆ. 28 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಉಡಾವಣೆ ಮಾಡಲಿದ್ದಾರೆ.
ಈ ಉಪಗ್ರಹವು ವಿಮಾನ ಸಂಚಾರದ ಮಾಹಿತಿಗೆ ಬಳಕೆ ಮಾಡುವ ರಾಡಾರ್ ಮಾದರಿಯಲ್ಲಿ ಹಡಗುಗಳ ಸಂಚಾರದ ಮೇಲೆ ನಿಗಾ ವಹಿಸಿ ಡಿಆರ್ಡಿಒಗೆ ಮಾಹಿತಿ ರವಾನೆ ಮಾಡಲಿದೆ. ಇದು ಸಮುದ್ರ ಸಂಚಾರ ದಟ್ಟಣೆಯ ಸಂದರ್ಭದಲ್ಲಿ ಯಾವುದೇ ಅನಾಹುತಗಳು ಸಂಭವಿಸದಂತೆ ಎಚ್ಚರ ವಹಿಸಲು ಇದು ಸಹಕಾರಿಯಾಗಲಿದೆ. ಸುಮಾರು 500 ಕಿಮೀ ದೂರದ ವರೆಗೆ ಈ ಉಪಗ್ರಹ ನಿಗಾ ಇರಿಸಲಿದೆ.
ಈ ಉಪಗ್ರಹ 15 ಕೆಜಿ ಗಳಷ್ಟು ತೂಕವಿರಲಿದ್ದು, 300 ಮಿ. ಮೀಟರ್ ಸುತ್ತಳತೆಯ 3 ಸೋಲಾರ್ ಪ್ಯಾನೆಲ್ಗಳು, ಬ್ಯಾಟರಿ, ಆಂಟೆನಾ ಸೇರಿದಂತೆ ಹಲವು ಉಪಕರಣಗಳನ್ನು ಒಳಗೊಂಡಿರಲಿದೆ. ಈ ಉಪಗ್ರಹವನ್ನು ಡಿಆರ್ಡಿಒ ನಿಯಂತ್ರಣ ಮಾಡಲಿದೆ. ಉಡಾವಣೆಯಾದ ಒಂದೂವರೆ ಗಂಟೆಯಲ್ಲಿ ಈ ಉಪಗ್ರಹ ಕಕ್ಷೆ ಸೇರಲಿದೆ. ಇದು 2 ವರ್ಷಗಳ ಕಾಲ ಬಾಳಿಕೆ ಬರಲಿದ್ದು, ಉಡಾವಣೆಯಾದ 1 ದಿನದ ಬಳಿಕ ಕಾರ್ಯಾಚರಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.