ಮಲಯಾಳಂ ʼಮೀಶಾʼ ಕಾದಂಬರಿಯನ್ನು ಎರಡು ವರ್ಷಗಳ ಹಿಂದೆ ಕೇರಳದ ಸ್ವಾಭಿಮಾನಿ ಮಲಯಾಳಿ ಸಮೂಹ ಸುಟ್ಟು ಹಾಕಿತ್ತು. ಎಡ ಚಿಂತಕ ವಿಚಾರವಾದಿ ಎನಿಸಿರುವ ಎಸ್. ಹರೀಶ್ ಈ ಕಾದಂಬರಿ ಬರಹಗಾರ. ಪ್ರಸ್ತುತ ಇದೇ ಕಾದಂಬರಿಯ ವಿಚಾರ ಮುನ್ನೆಲೆಗೆ ಬಂದಿದೆ. ಕೇರಳ ರಾಜ್ಯ ಸರ್ಕಾರದ ಅಧೀನದಲ್ಲಿರುವ ಅಕಾಡೆಮಿಯು ಮೀಶಾ ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಘೋಷಿಸಿದೆ. ಮೀಶಾ ಕಾದಂಬರಿಯು ಕೇರಳದಲ್ಲಿರುವ ಜಾತಿ ವ್ಯವಸ್ಥೆ, ಧರ್ಮ ದೇಗುಲ ಪ್ರವೇಶ ಮೊದಲಾದ ವಿಚಾರಗಳ ಬಗೆಗಿನ ಕಥಾಹಂದರವಾಗಿದೆ.
ದೇವಳ ಪ್ರವೇಶ ಮಾಡುವ ಹಿಂದೂ ಮಹಿಳೆಯನ್ನು ತೀರಾ ಅಸಹ್ಯ ಎನ್ನುವಂತೆ ಬಿಂಬಿಸಿರುವ ಕಾದಂಬರಿಯಲ್ಲಿ ಈರ್ವರು ಸ್ನೇಹಿತರು ಮಾತನಾಡುವ ಸಂಭಾಷಣೆಯ ಸಾಲುಗಳೂ ಇವೆ. ಓರ್ವ ಗೆಳೆಯ ಮಹಿಳೆಯರು ಯಾತಕ್ಕಾಗಿ ಒಂದೇ ತೆರನಾದ ಉಡುಪನ್ನು ಧರಿಸಿ ದೇವಳ ಪ್ರವೇಶಿಸುತ್ತಾರೆ ಎಂಬ ಪ್ರಶ್ನೆಗೆ ಮತ್ತೋರ್ವನು ಅದೇ ಧಾಟಿಯಲ್ಲಿ ಉತ್ತರಿಸುವ ರೀತಿಯಿದೆ. ಕೊಳದಲ್ಲಿ ಸ್ನಾನ ಮಾಡಿ ದೇವಳ ಪ್ರವೇಶಿಸುವ ಬಗ್ಗೆಯೂ ಅಸಹ್ಯ ಎನಿಸುವ ಸಂಭಾಷಣೆಯಿದೆ. ದೇವರ ಸ್ವಂತ ನಾಡು ಎನಿಸಿಕೊಂಡಿರುವ ರಾಜ್ಯದಲ್ಲಿ ಮೀಶಾ ಎಂಬ ಕಾದಂಬರಿಯ ಉಲ್ಲೇಖವನ್ನು ಖಂಡಿಸಿರುವ ಸ್ವಾಭಿಮಾನಿ ಮಂದಿ ಈ ಕಾದಂಬರಿಯ ಸಾಲುಗಳನ್ನು ಸುಪ್ರಿಂಕೋರ್ಟ್ ತನಕ ಕೊಂಡೊಯ್ದಿದ್ದಾರೆ. ಈ ಕಾದಂಬರಿಯನ್ನು ಈ ಹಿಂದೆ ಮಲಯಾಳಂ ವಾರಪತ್ರಿಕೆ ಮಾತೃಭೂಮಿಯಲ್ಲಿ ಹಂತ ಹಂತವಾಗಿ ಪ್ರಕಟಿಸಲಾಗಿತ್ತು. ನಂತರ ಈ ಪುಸ್ತಕವನ್ನು ಡಿಸಿ ಬುಕ್ಸ್ ಪ್ರಕಟಿಸಿತ್ತು. ಮಹಿಳೆಯರನ್ನು ಅವಹೇಳನಕಾರಿಯಾಗಿ ಚಿತ್ರಿಸಿದ ಕಾದಂಬರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿದ ಕ್ರಮವನ್ನು ಬಿಜೆಪಿ ಕೇರಳ ಅಧ್ಯಕ್ಷ ಕೆ. ಸುರೇಂದ್ರನ್ ಕಟು ಮಾತುಗಳಿಂದ ಖಂಡಿಸಿದ್ದಾರೆ.
ಮಾತೃಪ್ರಧಾನವಾಗಿರುವ ಕುಟುಂಬ ವ್ಯವಸ್ಥೆಯನ್ನು ಹೊಂದಿರುವ ಕೇರಳ ದೇಶಕ್ಕೆ ಮಾದರಿ. ದೇಶದ ಯಾವ ಭಾಗದಲ್ಲೂ ಇಂತಹ ಕುಟುಂಬ ವ್ಯವಸ್ಥೆ ಕಾಣಲು ಸಾಧ್ಯವಿಲ್ಲ. ಮಾತೃತ್ವ ಈ ನೆಲದ ಗುಣ. ಇಂತಹ ಪುಣ್ಯದ ನಾಡಲ್ಲಿ ಮಹಿಳೆಯರನ್ನೇ ಶೋಷಿತರನ್ನಾಗಿ ಉಲ್ಲೇಖಿಸುವಂತಿರುವ ಮೀಶಾ ಕಾದಂಬರಿಗೆ ದಿಕ್ಕಾರವಿದೆ. ಈ ಸಂದರ್ಭ ಪ್ರಶಸ್ತಿ ಘೋಷಿಸಿದ ಸರ್ಕಾರ, ಮಂಡಳಿಗೂ ಸ್ವಾಭಿಮಾನಿಗಳು ಛೀಮಾರಿ ಹಾಕಿದ್ದಾರೆ.
ಕನ್ನಡದಲ್ಲಿ ಹಿಂದೂ ಭಾವನೆಗಳನ್ನು ಅಪಮಾನಗೊಳಿಸಿದ ದುಂಢಿ ಕಾದಂಬರಿ ಕರ್ತೃವಿನಂತೆ ಮಲಯಾಳಿ ಎಸ್. ಹರೀಶ್ ಮೀಶಾ ಕಾದಂಬರಿಯ ಲೇಖಕ. ಮಲಯಾಳಂ ಮಾತೃಭೂಮಿ ವಾರ ಪತ್ರಿಕೆಯಲ್ಲಿ ಮೊದಲು ಪ್ರಕಟಗೊಂಡ ಕಾದಂಬರಿಯ ಲೇಖನಮಾಲೆ ನಂತರದಲ್ಲಿ ಪುಸ್ತಕ ರೂಪಕ್ಕೆ ಇಳಿಯಿತು. ಪ್ರಕಟಗೊಂಡ ಲೇಖನಗಳ ವಿರುದ್ಧ 2018 ರಲ್ಲೇ ದನಿಯನ್ನು ಎತ್ತಲಾಗಿತ್ತು. 2020 ರಲ್ಲಿ ಮೀಶಾʼದ ಆಂಗ್ಲ ಭಾಷಾಂತರ ಮುಸ್ಟ್ಯಾಚ್ ಪ್ರಕಟಗೊಂಡಿದ್ದು, ಅದಕ್ಕೂ ಜೆಸಿಬಿ ಪ್ರಸಸ್ತಿ ನೀಡಲಾಗಿದೆ. ಕೊಟ್ಟಾಯಂ ಮೂಲದ ವ್ಯಕ್ತಿಯಾಗಿರುವ ಲೇಖಕ, ಅದೇ ಜಿಲ್ಲೆಯ ಗ್ರಾಮ ಕಚೇರಿಯಲ್ಲಿ ಗುಮಾಸ್ತನಾಗಿ ಕರ್ತವ್ಯದಲ್ಲಿದ್ದಾನೆ.
‘ಕೀಳುಮಟ್ಟದ ಕಾದಂಬರಿ’
ಕೇರಳದಲ್ಲಿ ಈ ಹಿಂದೆ ಇಂತಹ ಕೀಳುಮಟ್ಟದ ಕಾದಂಬರಿ ಬರಹವನ್ನು ಕಂಡಿಲ್ಲ. ಇಂತಹ ವಿಷಕಾರುವ ಮೀಶಾಕ್ಕೆ ಪ್ರಶಸ್ತಿ ದಯಪಾಲಿಸಿ ಹಿಂದೂ ಭಾವನೆಗಳಿಗೆ ಸರ್ಕಾರ ಧಕ್ಕೆ ತಂದಿದೆ. ಶಬರಿಮಲೆ ವಿಚಾರದ ನಂತರದಲ್ಲಿ ರಾಜ್ಯ ಸರಕಾರ ನಿರಂತರವಾಗಿ ಹಿಂದೂ ಭಾವನೆಗಳನ್ನು ಘಾಸಿಗೊಳಿಸುತ್ತಿದೆ.
ಕೆ. ಸುರೇಂದ್ರನ್, ಬಿಜೆಪಿ ಕೇರಳ ರಾಜ್ಯಾಧ್ಯಕ್ಷ
✍️ ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.