ನವದೆಹಲಿ: ಪ್ರತಿಷ್ಠಿತ ಮ್ಯೂಸಿಕ್ ಕಂಪನಿ ಗಾನ, ತನ್ನ ಸಿಬ್ಬಂದಿ ಹಿಂದೂ ಧರ್ಮ ಮತ್ತು ಸಮುದಾಯದ ಮೇಲೆ ನಿಂದನಾರ್ಹ
ಟ್ವೀಟ್ ಮಾಡಿದ ಹಿನ್ನೆಲೆ ಕರ್ತವ್ಯದಿಂದ ವಜಾಗೊಳಿಸಿದೆ.
ಗಾನಾ ಉದ್ಯೋಗಿ ಟಾಂಜಿಲಾ ಅನಿಸ್ ಎಂಬಾಕೆ ಹಿಂದೂ ವಿರೋಧಿ ಟ್ವೀಟ್ ಗಳನ್ನು ಮಾಡಿದ್ದು, ಈ ವಿಚಾರ ಗಾನ ಸಂಸ್ಥೆಯ ಗಮನಕ್ಕೆ ಬಂದ ತಕ್ಷಣದಲ್ಲೇ ಆಕೆಯನ್ನು ಕೆಲಸದಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ.
ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಬಜರಂಗದಳದ ಕಾರ್ಯಕರ್ತ ರಿಂಕು ಶರ್ಮಾ ಅವರು ನಾಲ್ವರು ಮತಾಂಧರಿಂದ ಕ್ರೂರವಾಗಿ ಹತ್ಯೆಗೊಳಗಾದಾಗ ಇಡೀ ದೇಶವೇ ಈ ಘಟನೆಗೆ ವಿಷಾದ ವ್ಯಕ್ತಪಡಿಸಿತ್ತು. ಆದರೆ ಟಾಂಜಿಲಾ ಅನಿಸ್ ಮಾತ್ರ ಈ ದುರಂತವನ್ನು ಅಪಹಾಸ್ಯ ಮಾಡಿ ಟ್ವೀಟ್ ಮಾಡುವ ಮೂಲಕ ಹಿಂದೂಗಳನ್ನು ಕೆರಳಿಸಿದ್ದಾಳೆ. ಹಾಗೆಯೇ ಹಿಂದೂಗಳು ಪೂಜಿಸುವ ಶಿವ, ಹನುಮಂತ ಮೊದಲಾದ ದೇವರನ್ನು ಅವಾಚ್ಯವಾಗಿ ಮತ್ತು ಅಶ್ಲೀಲವಾಗಿ ಟ್ವೀಟ್ ಮಾಡುವ ಮೂಲಕ ಹಿಂದೂ ವಿರೋಧಿ ನೀತಿಯನ್ನು ಜಗಜ್ಜಾಹೀರು ಮಾಡಿದ್ದಾಳೆ. ಈಕೆಯ ಇಂತಹ ನಿರಂತರ ಟ್ವೀಟ್ನಿಂದ ಹಿಂದೂಗಳು ತಮ್ಮ ಆಕ್ರೋಶವನ್ನು ಗಾನಾ ಅಪ್ಲಿಕೇಶನ್ ಅನ್ನು UNINSTALL ಮಾಡುವ ಮೂಲಕ ತೋರಿಸಿದ್ದಾರೆ.
ಬಳಿಕ ಎಚ್ಚೆತ್ತ ಗಾನ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ʼಗಾನ ಭಾರತದ ಎಲ್ಲಾ ಧರ್ಮಗಳನ್ನು ಮತ್ತು ಸಮುದಾಯಗಳನ್ನು ಗೌರವಿಸುತ್ತದೆ. ಗಾನಾದ ಇತ್ತೀಚೆಗೆ ಸೇರಿದ ಉದ್ಯೋಗಿಯೊಬ್ಬಳ ಸಾಮಾಜಿಕ ಮಾಧ್ಯಮ ಪೋಸ್ಟ್ಗಳಿಗೆ ಸಂಬಂಧಿಸಿದಂತೆ, ಅವುಗಳು ನಮ್ಮ ಮೌಲ್ಯಗಳನ್ನು ಪ್ರತಿನಿಧಿಸುವುದಿಲ್ಲ. ತಪ್ಪಿತಸ್ಥರನ್ನು ಸಂಸ್ಥೆಯಿಂದ ವಜಾ ಮಾಡಲಾಗಿದೆʼ ಎಂದು ಟ್ವೀಟ್ ಮಾಡಿದೆ.
Gaana respects all religions and communities of India.
With regards to the social media posts by a recently joined employee of Gaana, these posts do not represent our values. She is no longer employed by the company.
We will continue to bring music to our country.
— @gaana (@gaana) February 13, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.