ನವದೆಹಲಿ: 22 ವರ್ಷದ ದಿಶಾ ರವಿ ಬಂಧನದ ನಂತರ, ರೈತ ಪ್ರತಿಭಟನೆಯನ್ನು ಬೆಂಬಲಿಸಿ ಹವಾಮಾನ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಹಂಚಿಕೊಂಡ “ಟೂಲ್ಕಿಟ್” ಪ್ರಕರಣಕ್ಕೆ ಇನ್ನೂ ಇಬ್ಬರು ಹೋರಾಟಗಾರರನ್ನು ಪೊಲೀಸರು ಬಂಧಿಸಲು ಸಜ್ಜಾಗಿದ್ದಾರೆ.
ಹೋರಾಟಗಾರರಾದ ನಿಕಿತಾ ಜಾಕೋಬ್ ಮತ್ತು ಶಂತನು ವಿರುದ್ಧ ವಾರಂಟ್ ಹೊರಡಿಸಲಾಗಿದೆ, ಜಾಮೀನು ಸಿಗದಂತಹ ಆರೋಪಗಳನ್ನು ಅವರು ಎದುರಿಸುತ್ತಿದ್ದಾರೆ.
ತನಿಖೆಯ ಪ್ರಕಾರ, ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ರೈತರು ಗಣರಾಜ್ಯೋತ್ಸವದಂದು ಪ್ರತಿಭಟನೆ ನಡೆಸುವ ಮುಂಚಿತವಾಗಿ ಟ್ವಿಟ್ ಅಲೆ ಎಬ್ಬಿಸುವಂತೆ ಮಾಡಲು ನಿಕಿತಾ ಜಾಕೋಬ್ ಅವರನ್ನು ಸಂಪರ್ಕಿಸಿತ್ತು. ಈ ಸಂಘಟನೆಯು ಖಲಿಸ್ತಾನಿ ಗುಂಪು ಎಂಬುದು ತಿಳಿದು ಬಂದಿದೆ.
ಪಿತೂರಿ ಮತ್ತು ದೇಶದ್ರೋಹದ ಆರೋಪದ ಮೇಲೆ ಬೆಂಗಳೂರು ಕಾಲೇಜು ಪದವೀಧರೆ ಮತ್ತು ಹವಾಮಾನ ಕಾರ್ಯಕರ್ತೆ ದಿಶಾ ರವಿ ಅವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಇದೀಗ ಹೊಸ ವಾರೆಂಟ್ಗಳು ಹೊರಬಿದ್ದಿವೆ. ದಿಶಾ ರವಿ ಅವರ ವಕೀಲರಿಲ್ಲದೆ ನಿನ್ನೆ ದೆಹಲಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು ಮತ್ತು ಐದು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ಟೂಲ್ಕಿಟ್ ಡಾಕ್ಯುಮೆಂಟ್ ಅನ್ನು ಸಿದ್ಧಪಡಿಸುವಲ್ಲಿ ಮತ್ತು ಅದರ ಪ್ರಸರಣದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಆರೋಪವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.