ನವದೆಹಲಿ: ಗೂಗಲ್ ಮ್ಯಾಪ್ಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಡಿಜಿಟಲ್ ಮ್ಯಾಪಿಂಗ್ ಮತ್ತು ಸ್ಥಳ ಆಧಾರಿತ ಡೀಪ್-ಟೆಕ್ ಕಂಪನಿ ಮ್ಯಾಪ್ಮೈಇಂಡಿಯಾ ಶುಕ್ರವಾರ ಸಂಪೂರ್ಣ ಸ್ಥಳೀಯ, ಮ್ಯಾಪಿಂಗ್ ಪೋರ್ಟಲ್ ಮತ್ತು ಜಿಯೋಸ್ಪೇಷಿಯಲ್ ಸೇವೆಗಳನ್ನು ನೀಡುವ ಹೊಸ ಉಪಕ್ರಮವನ್ನು ಪ್ರಕಟಿಸಿದೆ.
ಈ ಸೇವೆಗಳು ಮ್ಯಾಪ್ಮೈಇಂಡಿಯಾದ ಡಿಜಿಟಲ್ ನಕ್ಷೆಗಳು ಮತ್ತು ತಂತ್ರಜ್ಞಾನಗಳ ಶಕ್ತಿಯನ್ನು ಇಸ್ರೋನ ಉಪಗ್ರಹ ಚಿತ್ರಣ ಮತ್ತು ಭೂ ವೀಕ್ಷಣಾ ದತ್ತಾಂಶಗಳ ಕ್ಯಾಟಲಾಗ್ನೊಂದಿಗೆ ಸಂಯೋಜಿಸಲಿದೆ.
ಇಸ್ರೋ ಜೊತೆಗಿನ ಸಂಯೋಜಿತ ಸಹಭಾಗಿತ್ವದ ಮೂಲಕ, ಮ್ಯಾಪ್ಮೈಇಂಡಿಯಾದ ಅಂತಿಮ ಬಳಕೆದಾರ ನಕ್ಷೆಗಳು, ಅಪ್ಲಿಕೇಶನ್ಗಳು ಮತ್ತು ಸೇವೆಗಳು ವಿದೇಶಿ ಮ್ಯಾಪ್ ಅಪ್ಲಿಕೇಶನ್ಗಳು ಮತ್ತು ಸೊಲ್ಯೂಷನ್ಗಳಿಗೆ ಹೋಲಿಸಿದರೆ, ಭಾರತೀಯರಿಗೆ ಗೌಪ್ಯತೆ ಕೇಂದ್ರಿತ, ಹೈಪರ್ ಲೋಕಲ್ ಮತ್ತು ಸ್ಥಳೀಯ ಮ್ಯಾಪಿಂಗ್ ಸೊಲ್ಯೂಷನ್ ಆಗಿದೆ ಎಂದು ಕಂಪನಿ ಹೇಳಿದೆ.
“ಇಸ್ರೋ ಜೊತೆಗಿನ ಈ ಸಹಭಾಗಿತ್ವವು ನಕ್ಷೆಗಳು ಮತ್ತು ಜಿಯೋಸ್ಪೇಷಿಯಲ್ ತಂತ್ರಜ್ಞಾನಗಳ ಕಾರ್ಯತಂತ್ರದ ಪ್ರದೇಶದಲ್ಲಿ ಆತ್ಮನಿರ್ಭರ ಭಾರತರದ ಹೊಸ ಉದಯವನ್ನು ಸೂಚಿಸುತ್ತದೆ” ಎಂದು ಮ್ಯಾಪ್ಮೈಇಂಡಿಯಾದ ಸಿಇಒ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ರೋಹನ್ ವರ್ಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ನಿಮಗೆ ಇನ್ನು ಮುಂದೆ ಗೂಗಲ್ ಮ್ಯಾಪ್ಸ್ / ಅರ್ಥ್ ಅಗತ್ಯವಿಲ್ಲ” ಎಂದು ವರ್ಮಾ ಲಿಂಕ್ಡ್ಇನ್ನಲ್ಲಿನ ಲೇಖನದ ಶೀರ್ಷಿಕೆಯಲ್ಲಿ ಹೇಳಿದ್ದಾರೆ.
“ಮ್ಯಾಪ್ಮೈಇಂಡಿಯಾದ ನಕ್ಷೆಗಳು ಎಲ್ಲಾ 7.5 ಲಕ್ಷ ಹಳ್ಳಿಗಳನ್ನು, ರಸ್ತೆ ಮತ್ತು ಕಟ್ಟಡ ಮಟ್ಟದಲ್ಲಿ 7500+ ನಗರಗಳನ್ನು ಒಳಗೊಂಡಿದೆ, ಎಲ್ಲಾ 63 ಲಕ್ಷ ಕಿಲೋಮೀಟರ್ ರಸ್ತೆ ನೆಟ್ವರ್ಕ್ ಪ್ಯಾನ್ ಇಂಡಿಯಾ ಮತ್ತು ನಗರಗಳಲ್ಲಿ ಸಂಪರ್ಕ ಹೊಂದಿದೆ, ಒಟ್ಟಾರೆಯಾಗಿ ಭಾರತದಾದ್ಯಂತ ಸರಿಸಾಟಿಯಿಲ್ಲದ 3+ ಕೋಟಿ ಸ್ಥಳಗಳಿಗೆ ನಕ್ಷೆಗಳನ್ನು ಒದಗಿಸುತ್ತದೆ,” ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
ಜವಾಬ್ದಾರಿಯುತ, ಸ್ಥಳೀಯ ಭಾರತೀಯ ಕಂಪನಿಯಾಗಿರುವುದರಿಂದ, ಅದರ ನಕ್ಷೆಗಳು ದೇಶದ ನಿಜವಾದ ಸಾರ್ವಭೌಮತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ಖಚಿತಪಡಿಸಿದೆ, ಭಾರತದ ಸರ್ಕಾರದ ಪ್ರಕಾರವೇ ಭಾರತದ ಗಡಿಗಳನ್ನು ಚಿತ್ರಿಸುತ್ತದೆ ಮತ್ತು ಭಾರತದಲ್ಲಿ ಅದರ ನಕ್ಷೆಗಳನ್ನು ಆಯೋಜಿಸುತ್ತದೆ.
ಹವಾಮಾನ, ಮಾಲಿನ್ಯ, ಕೃಷಿ ಉತ್ಪಾದನೆ, ಭೂ ಬಳಕೆಯ ಬದಲಾವಣೆಗಳು, ಪ್ರವಾಹ ಮತ್ತು ಭೂಕುಸಿತ ವಿಪತ್ತುಗಳ ಬಗ್ಗೆ ನಕ್ಷೆ ಆಧಾರಿತ ವಿಶ್ಲೇಷಣೆ ಮತ್ತು ಒಳನೋಟಗಳಿಂದ ಬಳಕೆದಾರರು ಹೆಚ್ಚಿನ ಲಾಭ ಪಡೆಯುತ್ತಾರೆ ಎಂದು ಕಂಪನಿ ತಿಳಿಸಿದೆ.
ಮ್ಯಾಪ್ಮೈಇಂಡಿಯಾ ತನ್ನ ನಕ್ಷೆಗಳು ಮತ್ತು ಎಪಿಐಗಳು (ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ಗಳು) ಇಸ್ರೋದ ಜಿಯೋಪೋರ್ಟಲ್ಗಳನ್ನು ಉತ್ಕೃಷ್ಟಗೊಳಿಸುತ್ತದೆ ಎಂದು ಹೇಳಿದ್ದಾರೆ.
ಇದು ಭಾರತದ ಅತ್ಯುತ್ತಮ ಉಪಗ್ರಹ ಚಿತ್ರಣ, ಭೂ ವೀಕ್ಷಣೆ ದತ್ತಾಂಶ ಮತ್ತು ಡಿಜಿಟಲ್ ನಕ್ಷೆ ದತ್ತಾಂಶ ಮತ್ತು ಸುಧಾರಿತ ಜಿಯೋಸ್ಪೇಷಿಯಲ್ ತಂತ್ರಜ್ಞಾನಗಳೊಂದಿಗೆ ಭಾರತೀಯ ವಿಜ್ಞಾನಿಗಳು, ಅಕಾಡೆಮಿಗಳು, ಸಂಶೋಧಕರು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಅಧಿಕಾರ ನೀಡುತ್ತದೆ, ಇವೆಲ್ಲವೂ ಒಟ್ಟಾಗಿ ಸ್ಥಳೀಯ ಇಸ್ರೋ-ಮ್ಯಾಪ್ಮೈಇಂಡಿಐಾ ವೇದಿಕೆಯಲ್ಲಿ ಸಂಯೋಜಿಸಲ್ಪಟ್ಟಿದೆ ಎಂದು ಕಂಪನಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.