ಆತ ಒಬ್ಬ ರಾಮ ಭಕ್ತ, ಒಂದು ಸಂಘಟನೆಯ ಕಾರ್ಯಕರ್ತ. ಎಂದೂ ಬೇರೆಯವರಿಗೆ ಕೆಡಕು ಬಯಸಿದವನಲ್ಲ, ರಾಮಮಂದಿರದ ವಿಚಾರವಾಗಿ ಮನೆ ಮನೆಗೆ ತೆರಳಿ ಹಣ ಸಂಗ್ರಹ ಮಾಡಲು ಬಹಳ ಉತ್ಸುಕತೆಯಿಂದಲೇ ಭಾಗವಹಿಸಿದ್ದ ಯುವ ಉತ್ಸಾಹಿ.
ಆದರೆ ಆತನ ಮನೆಯ ಸುತ್ತ ಮುತ್ತಲಿದ್ದ ಆತನ ಸ್ನೇಹಿತರು ಎಂದೆನಿಸಿಕೊಂಡಿದ್ದ ಕೆಲ ಧರ್ಮಾಂಧರು ಈತನ ಕೆಲಸ ಕಂಡು, ಆತನ ತಂದೆಗೆ ಬೆದರಿಕೆ ಹಾಕಿದ್ದರು. ರಾಮ ಮಂದಿರಕ್ಕಾಗಿ ಓಡಾಟ ಮಾಡಿದರೆ, ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ ಕೊಚ್ಚಿಹಾಕುವುದಾಗಿಯೂ ಬೆದರಿಸಿದ್ದರು. ಅದಾವುದನ್ನೂ ಲೆಕ್ಕಿಸದೆ ಆತ ತನ್ನ ರಾಮಸೇವೆ ಮತ್ತು ರಾಷ್ಟ್ರಸೇವೆಯ ಧಾವಂತವನ್ನು ಹೆಚ್ಚಿಸಿ ಮುಂದುವರೆಸಿದ್ದ.
ಅಂದ ಹಾಗೆ ಆತನ ಹೆಸರು ರಿಂಕು ಶರ್ಮಾ. ಆತನಿದ್ದ ಸಂಘಟನೆ ಭಜರಂಗದಳ. ಆತ ಯಾವುದೇ ಅನ್ಯ ಧರ್ಮದ ವಿರುದ್ಧ ಮಾತಾಡಿದವನಲ್ಲ. ಆತ ಕೇವಲ ರಾಮ ಕಾರ್ಯ ಮಾಡುತ್ತಿದ್ದ. ಹಿಂದೂವಾಗಿ ಹಿಂದೂ ದೇವಾಲಯದ ಕಾರ್ಯಕ್ಕೆ ಓಡಾಡುತ್ತಿದ್ದ. ಭಾರತದ ಅಸ್ಮಿತೆಗಾಗಿ ಬೆವರು ಸುರಿಸುತ್ತಿದ್ದ. ಮಾತ್ರವಲ್ಲ ಅವನ ಸ್ನೇಹಿತನೆಂದು ಕರೆಸಿಕೊಂಡಿದ್ದ ಗೋ ಮುಖ ವ್ಯಾಘ್ರನ ಹೆಂಡತಿಗೆ ಕೋವಿಡ್ ಆದಾಗ ಮಾನವತ್ವದ ನೆಲೆಯಲ್ಲಿ ಎರಡು ಬಾರಿ ತನ್ನ ರಕ್ತದಾನವನ್ನೂ ಮಾಡಿದ್ದ.
ಹೌದು ಈ ಬರಹದುದ್ದಕ್ಕೂ ಆತನಿದ್ದ, ಮಾಡುತ್ತಿದ್ದ ಎಂದೇ ಹೇಳಲಾಗಿದೆ. ಏಕೆಂದರೆ ಆತ ಇಂದು ನಮ್ಮೊಂದಿಗಿಲ್ಲ. ಆತ ಆ ದಿನ ರಾತ್ರಿ ಮನೆಗೆ ಬಂದು ವಿಶ್ರಮಿಸಬೇಕೆಂದಿದ್ದ. ಆದರೆ ಆ ದಿನ ಆತನ ಕರಾಳ ಮತ್ತು ಕೊನೆಯ ರಾತ್ರಿಯಾಗಿತ್ತು. ಆತನ ಸ್ನೇಹಿತರು ಎಂದು ಅಂದುಕೊಂಡಿದ್ದ ಗೂಂಡಾಗಳು ಏಕಾ ಏಕಿ ಮನಗೆ ನುಗ್ಗಿದ್ದರು. ಕಾಫೀರನ ಮನೆಗೆ ಹೋಗುವಾಗ ಹೇಗೆ ಹೋಗಬೇಕೆಂಬ ಪಾಠವನ್ನು ಅವರಿಗೆ ಚೆನ್ನಾಗಿಯೇ ಕಲಿಸಿ ಕೊಡಲಾಗಿತ್ತೋ ಏನೋ, ದೊಣ್ಣೆ ಚೂರಿಗಳೊಂದಿಗೆ ಸಶಸ್ತ್ರಧಾರಿಗಳಾಗಿ ಮನೆಗೆ ನುಗ್ಗಿದ್ದರು.
ಮನೆಯಲ್ಲಿ ತಂದೆ ತಾಯಿಯರಿದ್ದರು ಅಣ್ಣನಿದ್ದ ಅವರೆದುರೇ ರಿಂಕೂವನ್ನು ಹಿಡೆದೆಳೆದರು, ಅಂಗಲಾಚಿ ಬೇಡುತ್ತಿದ್ದ ತಾಯಿಯ ಆಕ್ರಂದನ ಅಲ್ಲಿದ್ದ ಯಾವ ರಕ್ಕಸನಿಗೂ ಕೇಳಲಿಲ್ಲ, ಆತನನ್ನು ಬಡಿದರು, ಮನಬಂದಂತೆ ಚೂರಿಯಲ್ಲಿ ಚುಚ್ಚಿ ಚುಚ್ಚಿ ಕೊಂದರು. ತಂದೆ ತಾಯಿಯ ಎದುರೇ ಮಗನಾದ ರಿಂಕುವಿನ ಪ್ರಾಣಪಕ್ಷಿ ಹಾರಿ ಹೋಯಿತು. ರಾಮನ ಕಾರ್ಯಕ್ಕೆ ಹೋದವ ರಾಮನೆಡೆಗೆ ಹೋಗಬಾರದ ವಯಸ್ಸಿಗೆ ಅಂದರೆ ಕೇವಲ 25 ನೇ ವಯಸ್ಸಿಗೇ ನಡೆದ. ತಂದೆ ತಾಯಿಯರ ಗೋಳು ಆಕಾಶ ಮತ್ತು ಭೂಮಿಯನ್ನು ಒಗ್ಗೂಡಿಸುವಂತಿತ್ತು. ಬೆನ್ನಿನ ಹಿಂದೆ ಚುಚ್ಚಿದ್ದ ಚೂರಿ ಕಂಡವರ ಕರುಳನ್ನು ಬಗೆದೆಳೆವಂತಿತ್ತು.
ಆದರೆ ನಮ್ಮ ಮಾಧ್ಯಮಗಳು ತಮ್ಮನ್ನು ತಾವು ಮಾರಿಕೊಂಡು ದಂಧೆ ನಡೆಸುತ್ತಿವೆಯಲ್ಲ. ಅವರಿಗೆ ಇದಾವುದೂ ಧರ್ಮಾಂಧರ ಕ್ರೌರ್ಯದಂತೆ ಕಾಣುವುದಿಲ್ಲ. ಇಲ್ಲಿ ಧರ್ಮವೇ ಇಲ್ಲ. ಅದೇ ಮುಸಲ್ಮಾನನೊಬ್ಬ ಸತ್ತಿದ್ದರೆ ಕೊಂದವ ಹಿಂದೂ ಆಗಿದ್ದರೆ ಅದಾಗಲೇ #islamophobia ಟ್ವಿಟ್ಟರ್ನಲ್ಲಿ ಸದ್ದು ಮಾಡುತ್ತಿತ್ತು. NDTV ಯಲ್ಲಿ ಅರಚಾಟ ಕೂಗಾಟ ಆರಂಭವಾಗುತ್ತಿತ್ತು. ಆದರೆ ಇಂದು NDTV ನಡೆದುಕೊಂಡ ರೀತಿ ನೋಡಿದರೆ ಇವರಿಗಿಂತ ಕಳ್ಳಕಾಕರೇ ನೂರುಪಟ್ಟು ಮೇಲೆಂಬ ಭಾವ ಯಾರ ಮನಸ್ಸಿನಲ್ಲೂ ಬಾರದಿರದು.
ಸ್ವಾಮಿ ಸಾಕು ಸೆಕ್ಯುಲರಿಸಂನ ಗಿಣಿ ಪಾಠ. ತನ್ನ ಹೆಂಡತಿಗೆ ರಕ್ತನೀಡಿ ಪ್ರಾಣ ಉಳಿಸಿದಾತನನ್ನು, ಆತನ ಮನೆಗೆ ನುಗ್ಗಿ ತಂದೆ ತಾಯಿಯರೆದುರೇ ಮನಬಂದಂತೆ ಕೊಚ್ಚಿ ಕೊಂದ ಧೂರ್ತ ಧರ್ಮಾಂಧರಿಗೆ ಋಣ ತೀರಿಸುವ ಮಾನವ ಧರ್ಮದ ಅರಿವಿರಲು ಸಾಧ್ಯವೇ? ಅದೆಲ್ಲೋ ದೆಹಲಿಯಲ್ವಾ ಎಂದು ಸುಮ್ಮನಿದ್ದರೆ ನಾಳೆ ನಮ್ಮ ಮನೆಯೊಳಗೂ ನಗ್ಗುವರು, ಇಂದೇ ಇಂತಹ ಘಟನೆಗಳ ವಿರುದ್ಧ ನಮ್ಮ ಧ್ವನಿ ಗಟ್ಟಿಯಾಗಿ ಮೊಳಗಿ ಬರಬೇಕು.
ನಾವೆಲ್ಲರೂ ಈಗಾಗಲೇ ಪುತ್ರ ವಿಯೋಗ ಎದುರಿಸುತ್ತಿರುವ ತಾಯ್ತಂದೆಯರ ದನಿಯಾಗಬೇಕು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು, ಜೀವನ ಪರ್ಯಂತ ಅವರು ಒದ್ದಾಡುವಂತಾಗಬೇಕು. Minor major ಎಂಬ ಭಾವವಿಲ್ಲದೇ ಎಲ್ಲರಿಗೂ ತಕ್ಕ ಶಾಸ್ತಿಯಾಗಬೇಕು.
ಹಿಂದೂ ಅಮಾಯಕರ ರಕ್ಷಣೆ, ಭಾರತದ ರಕ್ಷಣೆಗೆ ನಾವು ಪಣತೊಡಬೇಕಾಗಿದೆ. ಅನಾಚಾರಿಗಳ ವಿರುದ್ಧ, ಅತ್ಯಾಚಾರಿಗಳ ವಿರುದ್ಧ, ಕೊಲೆಗಡುಕರ ವಿರುದ್ಧ ನಮ್ಮ ಸಮಾಜ ಒಂದಾಗಿ ಹೋರಾಡಬೇಕಿದೆ.
ಬನ್ನಿ ಒಂದಾಗೋಣ, ಹೋರಾಡೋಣ, ಮುಗ್ಧರನ್ನು ಕಾಪಾಡೋಣ ಮತ್ತು ದುರಂತದಿಂದ ಪಾರಾಗೋಣ.
ವಂದೇ ಮಾತರಂ.🙏
ಭಾರತ್ ಮಾತಾ ಕೀ ಜೈ.🙏
✍ಚಿನ್ಮಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.