ಶಿವಮೊಗ್ಗ: ವಾಹನಗಳಿಗೆ ಪ್ರಸ್ತುತ ಬಳಕೆ ಮಾಡುತ್ತಿರುವ ಇಂಧನಕ್ಕೆ ಪರ್ಯಾಯ ಇಂಧನವೊಂದನ್ನು ಶಿವಮೊಗ್ಗದ ಸಾಗರ ತಾಲೂಕಿನ ಎಂಜಿನಿಯರಿಂಗ್ ವಿದ್ಯಾರ್ಥಿ ಗೌತಮ್ ಅವರು ಆವಿಷ್ಕಾರ ಮಾಡಿದ್ದಾರೆ.
ಸಾಗರದ ಹಂದಿಗೋಡಿನ ಎಚ್. ಪಿ. ಶ್ರೀಧರ – ರೋಹಿಣಿ ದಂಪತಿ ಪುತ್ರ, ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ 4 ನೇ ವರ್ಷದ ಮೆಕೆಟ್ರಾನಿಕ್ಸ್ ಪದವಿ ಓದುತ್ತಿರುವ ಗೌತಮ್, ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ನೀರಿನ ವೇಪರೈಸರ್ ಮೂಲಕ ರಾಸಾಯನಿಕ ಕ್ರಿಯೆ ಘಟಿಸಿದಾಗ ಉತ್ಪತ್ತಿಯಾಗುವ ಅಸಿಟೈಲಿನ್ ಅನಿಲದಿಂದ ದ್ವಿಚಕ್ರ ಚಲಾಯಿಸಬಹುದು ಎಂಬ ವಿನೂತನ ಆವಿಷ್ಕಾರವೊಂದನ್ನು ಮಾಡುವ ಮೂಲಕ ಸಾಧನೆ ಮೆರೆದಿದ್ದಾರೆ.
ಈ ನೂತನ ಪ್ರಾಜೆಕ್ಟ್ ಅನ್ನು ತಮ್ಮ ತಂಡದ ಜೊತೆ ಸಿದ್ಧಪಡಿಸಿ, ರಾಷ್ಟ್ರೀಯ ಸ್ಪರ್ಧೆಗೆ ಕಳುಹಿಸಿದ್ದಾರೆ. ಈ ಆವಿಷ್ಕಾರದ ಪ್ರಾಜೆಕ್ಟ್ ಕೆಪಿಟಿಟಿ ಸ್ಪಾರ್ಕಲ್ ರಾಷ್ಟ್ರಮಟ್ಟದ ಮೊದಲ ಮತ್ತು ಎರಡನೇ ಹಂತದಲ್ಲಿ ಆಯ್ಕೆಯಾಗಿ ಗ್ರಾಂಡ್ ಫಿನಾಲೆಗೆ ಆಯ್ಕೆಯಾಗಿದೆ. ಇವರು ಆವಿಷ್ಕರಿಸಿರುವ ಈ ಇಂಧನ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಲಿದೆ. ಕಡಿಮೆ ಖರ್ಚಿನಲ್ಲಿ ಸುಲಭ ನಿರ್ವಹಣೆಯೂ ಸಾಧ್ಯ. ತಂಡದಲ್ಲಿ ಎಚ್.ಎಸ್. ಗೌತಮ್, ವಿಶಾಲ ಸರ್ವಂದ್, ಎಚ್.ಎಸ್. ವಶಿಷ್ಠ ಮತ್ತು ರಾಮದಾಸ್ ಮೊದಲಾದವರು ಕೆಲಸ ಮಾಡಿದ್ದಾರೆ. ಈ ಇಂಧನ 65 ರಿಂದ 66 ಕಿಮೀ ಮೈಲೇಜ್ ನೀಡುವುದಾಗಿಯೂ ಅವರು ಹೇಳಿದ್ದಾರೆ.
ಇದನ್ನು ತಮ್ಮ ತಂದೆಯ ಬೈಕ್ ಗೆ ಬಳಸುವ ಮೂಲಕ ಪರೀಕ್ಷೆ ಮಾಡಲಾಗಿದೆ. 49 ರೂ. ಕೊಟ್ಟು ಖರೀದಿಸಿದ 1 ಕೆಜಿ ಕಾಲ್ಸಿಯಂ ಕಾರ್ಬೈಡ್ನಿಂದ 1 ಕೆಜಿ ಅಸಿಟೈಲಿನ್ ಅನಿಲ ತಯಾರಿಸಬಹುದು. ಇದರಲ್ಲಿ 65 ರಿಂದ 66 ಕಿ.ಮೀ. ಮೈಲೇಜ್ ಬರುತ್ತಿದೆ. ಬೈಕ್ಗೆ 5 ಸಾವಿರೂ ರೂ. ವೆಚ್ಚದ ಟ್ಯಾಂಕ್ ಅಳವಡಿಕೆ ಮಾಡಲಾಗಿದೆ. ಕ್ಯಾಲ್ಸಿಯಂ ಕಾರ್ಬೈಡ್ ಮೇಲೆ ವೇಪರೈಸರ್ ಮೂಲಕ ನೀರಿನ ವೆಫರ್ಸ್ ಸಂಪರ್ಕ ಆದಾಗ ರಾಸಾಯನಿಕ ಕ್ರಿಯೆ ನಡೆಯುತ್ತದೆ. ಆಗ ಅಸಿಟೈಲಿನ್ ಗ್ಯಾಸ್ ಉತ್ಪಾದನೆ ಆಗುತ್ತದೆ. ಅದರಿಂದ ವಾಹನ ಚಲಿಸುತ್ತದೆ. ರಾಸಾಯನಿಕ ಕ್ರಿಯೆ ನಂತರ ತ್ಯಾಜ್ಯ ಕಲ್ಲಿನ ರೂಪದಲ್ಲಿ ಉಳಿಯುತ್ತದೆ. ಅದನ್ನು ಮರಳಿಸಿ ಕ್ಯಾಲ್ಸಿಯಂ ಕಾರ್ಬೈಡ್ ಪಡೆದುಕೊಳ್ಳಲು ಸಾಧ್ಯ ಎಂದು ಅವರು ಈ ಆವಿಷ್ಕಾರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.