ನವದೆಹಲಿ: ಫೆಬ್ರವರಿ 27 ರಿಂದ ಮಾರ್ಚ್ 2 ರವರೆಗೆ ಸರ್ಕಾರವು ಮೊದಲ ಬಾರಿಗೆ ಭಾರತ ಆಟಿಕೆ ಮೇಳವನ್ನು ಆಯೋಜಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸ್ಮೃತಿ ಜುಬಿನ್ ಇರಾನಿ, ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಜಂಟಿಯಾಗಿ ‘ದಿ ಇಂಡಿಯಾ ಟಾಯ್ ವೆಬ್ಸೈಟ್’ ಅನ್ನು ಉದ್ಘಾಟಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ ಸ್ಮೃತಿ ಇರಾನಿ, “ಆತ್ಮ ನಿರ್ಭರ ಭಾರತ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯನ್ನು ಸಾಧಿಸಲು, ದೇಶದಲ್ಲಿ ಆಟಿಕೆ ಉತ್ಪಾದನಾ ಉದ್ಯಮವನ್ನು ಬಲಪಡಿಸಲು ಮತ್ತು ಕಲಿಕೆಯ ದೃಷ್ಟಿಕೋನದಿಂದ ಮಕ್ಕಳನ್ನು ಆಟಿಕೆಗಳೊಂದಿಗೆ ಸಂಪರ್ಕಿಸಲು ಸರ್ಕಾರ ಕಳೆದ ತಿಂಗಳು 1 ನೇ ಟಾಯ್ಕಾಥಾನ್ ಆಯೋಜಿಸಿತ್ತು” ಎಂದಿದ್ದಾರೆ.
ಆಧುನಿಕ ಭಾರತದ ಅವಶ್ಯಕತೆಗಳನ್ನು ಪೂರೈಸಲು ಮತ್ತು ಆಟಿಕೆ-ಉತ್ಪಾದನಾ ಉದ್ಯಮಕ್ಕೆ ಬೆಂಬಲವನ್ನು ಒದಗಿಸಲು ಮೊದಲ ಭಾರತ ಆಟಿಕೆ ಮೇಳವನ್ನು ಆಯೋಜಿಸಲು ಸರ್ಕಾರ ಪ್ರಸ್ತಾಪಿಸಿದೆ ಎಂದು ಸಚಿವರು ಹೇಳಿದರು.
ನೋಂದಣಿ ಉದ್ದೇಶಕ್ಕಾಗಿ indiatoyfair.in ವೆಬ್ಸೈಟ್ ಅನ್ನು ಇಂದು ಉದ್ಘಾಟಿಸಲಾಗಿದೆ ಎಂದು ಅವರು ಹೇಳಿದರು.
ಕರಕುಶಲ ಆಟಿಕೆ ತಯಾರಕರು 4 ಸಾವಿರ ಪ್ರತ್ಯೇಕ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಇಂಡಿಯಾ ಟಾಯ್ ಫೇರ್ಗೆ ವಾಣಿಜ್ಯ ಸಚಿವಾಲಯದ ಸಹಾಯದಿಂದ ಒಂದು ಸಾವಿರಕ್ಕೂ ಹೆಚ್ಚು ಕಂಪನಿಗಳು ಕೊಡುಗೆ ನೀಡುತ್ತಿವೆ ಎಂದು ಅವರು ಹೇಳಿದರು. ಭಾರತದಾದ್ಯಂತ ಶಾಲೆಗಳು ಮತ್ತು ಕಾಲೇಜುಗಳಿಗೆ ಮಾತ್ರವಲ್ಲದೆ ಸಾಂಪ್ರದಾಯಿಕ ಕರಕುಶಲ ಆಟಿಕೆ ಕುಶಲಕರ್ಮಿಗಳಿಗೆ ಆಹ್ವಾನಗಳನ್ನು ಕಳುಹಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
I, along with my esteemed colleagues Minister of Commerce & Industry;Railways; Consumer Affairs and Food & Public Distribution Shri @PiyushGoyal & Minister of Textiles and Women & Child Development Smt @smritiirani will be launching the website of The India Toy Fair – 2021. pic.twitter.com/KC3AwwThri
— Dr. Ramesh Pokhriyal Nishank (@DrRPNishank) February 11, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.