ನವದೆಹಲಿ: ಮೇಡ್-ಇನ್-ಇಂಡಿಯಾ ಸೋಷಿಯಲ್ ಮೀಡಿಯಾ ಅಪ್ಲಿಕೇಶನ್ ಕೂಗೆ ಸೇರಿದ್ದೇನೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಇಂದು ಘೋಷಿಸಿದ್ದಾರೆ ಮತ್ತು ಇದಕ್ಕೆ ಸೇರುವಂತೆ ಅವರ ಅನುಯಾಯಿಗಳಿಗೂ ಒತ್ತಾಯಿಸಿದ್ದಾರೆ.
ಕೂಗೆ ಸೇರಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಹಿರಿಯ ಸಚಿವ ಇವರಾಗಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರು ಕಳೆದ ವರ್ಷದಿಂದ ಸಾಮಾಜಿಕ ಮಾಧ್ಯಮ ವೇದಿಕೆಯ ಸದಸ್ಯರಾಗಿದ್ದಾರೆ. ಸಾಗಣೆ ರಾಜ್ಯ ಸಚಿವ ಮನ್ಸುಖ್ ಮಾಂಡವಿಯಾ ಕೂಡ ಕೂ ನಲ್ಲಿದ್ದಾರೆ.
ರೈಲ್ವೆ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ, ವಾಣಿಜ್ಯ ಮತ್ತು ಗ್ರಾಹಕ ವ್ಯವಹಾರಗಳಂತಹ ವಿವಿಧ ಸರ್ಕಾರಿ ಸಚಿವಾಲಯಗಳು ಕೂಡ ಕೂನಲ್ಲಿ ಖಾತೆ ತೆರೆದಿವೆ. ಸರ್ಕಾರಿ ಸಂಸ್ಥೆಗಳಾದ ಮೈಗೌವ್, ಡಿಜಿಟಲ್ ಇಂಡಿಯಾ, ಇಂಡಿಯಾ ಪೋಸ್ಟ್, ಎನ್ಐಸಿ, ನೀಲಿಟ್, ಸಮೀರ್, ಕಾಮನ್ ಸರ್ವೀಸಸ್ ಸೆಂಟರ್, ಉಮಾಂಗ್ ಆ್ಯಪ್, ಡಿಜಿ ಲಾಕರ್, ನಿಕ್ಸಿ, ಎಸ್ಟಿಪಿಐ, ಸಿಡಿಎಸಿ, ಮತ್ತು ಸಿಎಮ್ಇಟಿ ಸಹ ಖಾತೆ ತೆರೆದಿವೆ.
ಟ್ವಿಟರ್ ನೊಂದಿಗೆ ಹೆಚ್ಚುತ್ತಿರುವ ಭಿನ್ನಾಭಿಪ್ರಾಯದ ಸಂದರ್ಭದಲ್ಲಿ ಕೂಗೆ ಹೆಚ್ಚಿನ ಫಾಲೋವರ್ಗಳು ಸಿಗುತ್ತಿದ್ದಾರೆ.
I am now on Koo.
Connect with me on this Indian micro-blogging platform for real-time, exciting and exclusive updates.
Let us exchange our thoughts and ideas on Koo.
📱 Join me: https://t.co/zIL6YI0epM pic.twitter.com/REGioTdMfm
— Piyush Goyal (@PiyushGoyal) February 9, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.