ಬಂಟ್ವಾಳ: ರಿಕ್ಷಾ ಚಾಲಕರು ಪ್ರಮಾಣಿಕ ಸೇವೆಯ ಮೂಲಕ ಪ್ರಯಾಣಿಕರ ವಿಶ್ವಾಸವನ್ನು ಗಳಿಸಿಕೊಳ್ಳಿ ಎಂದು ಬಂಟ್ವಾಳ ಟ್ರಾಫಿಕ್ ಉಪನಿರೀಕ್ಷಕ ಚಂದ್ರಶೇಖರಯ್ಯ ಅವರು ಹೇಳಿದರು.
ಅವರು ಆಟೋ ರಿಕ್ಷಾ ಚಾಲಕ- ಮಾಲಕರ ಸಂಘ ಬಿ.ಯಂ.ಎಸ್. ಸಂಯೋಜಿತ ಮತ್ತು ಜನರಲ್ ಮಜ್ದೂರ್ ಸಂಘದ ಘಟಕ, ಬಿ.ಸಿರೋಡ್ ಇದರ 27ನೇ ವಾರ್ಷಿಕ ಮಹಾಸಭೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಾರ್ವಜನಿಕ ಸೇವೆಯಲ್ಲಿ ರಿಕ್ಷಾ ಚಾಲಕರ ಸೇವೆಯ ಪಾತ್ರ ಬಲು ದೊಡ್ಡದು. ಉದ್ಯೋಗದಲ್ಲಿ ಕೀಳರಿಮೆ ಬೇಡ. ಯಾವುದೇ ಉದ್ಯೋಗದಲ್ಲಿ ಸಾಧನೆ ಮಾಡಿ ತೋರಿಸುವುದೇ ಸಾರ್ಥಕತೆ ಎಂದರು. ಸಂಘದ ತಾತ್ಪರ್ಯ, ಧ್ಯೇಯ ಮತ್ತು ಉದ್ದೇಶಗಳನ್ನು ಅರಿತುಕೊಂಡು ಮುನ್ನಡೆದಾಗ ಸಂಘ ಬಲಿಷ್ಟವಾಗಿ ಬೆಳೆಯಲು ಸಾಧ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಯಂ.ಎಸ್.ನ ಜಿಲ್ಲಾಧ್ಯಕ್ಷರಾದ ಕೆ.ನಾರಾಯಣ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಕಾನೂನು ಸಲಹೆಗಾರ ನ್ಯಾಯವಾದಿ ಪಿ.ಜಯರಾಮ ರೈ, ಬಿ.ಎಂ.ಎಸ್. ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷ ರಾಮಚಂದ್ರ ಗೌಡ ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಸದಾನಂದ ಗೌಡ ಉಪಸಿತರಿದ್ದರು. ವಸಂತ ಕುಮಾರ್ ಸ್ವಾಗತಿಸಿ ಸದಾನಂದ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.